ಪ್ರಪಂಚದಲ್ಲಿ ಬರೋಬ್ಬರಿ 3,95,93,953 ಜನರಿಗೆ ಮಾರಣಾಂತಿಕ ಕೊರೊನಾ ವೈರಸ್ ಅಂಟಿದ್ದು, 11,09,252 ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಸುಮಾರು 3 ಕೋಟಿ (2,96,61,167) ಮಂದಿ ಗುಣಮುಖರಾಗಿದ್ದಾರೆ.
ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 82,88,278 ಇದ್ದು, ಮೃತರ ಸಂಖ್ಯೆ 2,23,644ಕ್ಕೆ ಏರಿಕೆಯಾಗಿದೆ.ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 74,32,680 ಕೇಸ್ಗಳು ಪತ್ತೆಯಾಗಿದ್ದು, 1,13,032 ಜನರು ವೈರಸ್ಗೆ ಬಲಿಯಾಗಿದ್ದಾರೆ.
ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 52,01,570 ಪ್ರಕರಣಗಳು ಹಾಗೂ 1,53,229 ಸಾವುಗಳು ವರದಿಯಾಗಿವೆ.4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 13,69,313 ಕೇಸ್ಗಳಿದ್ದು, 23,723 ಜನರು ಸಾವನ್ನಪ್ಪಿದ್ದಾರೆ.
No comments:
Post a Comment