Thursday, 29 April 2021

ಲಸಿಕೆ ಪಡೆದ 28 ದಿನದೊಳಗೆ ರಕ್ತದಾನ ಮಾಡುವಂತಿಲ್ಲ ರಕ್ತದ ಕೊರತೆ ನೀಗಿಸಲು ಲಸಿಕೆ ಪಡೆಯುವ ಮುನ್ನವೇ ಯುವಕರು ರಕ್ತದಾನ ಮಾಡಿ

ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಲೆಕ್ಕಾಚಾರಕ್ಕೂ ಮೀರಿ ಹಾನಿ ಉಂಟು ಮಾಡುತ್ತಿದ್ದು, ಆರೋಗ್ಯ ವ್ಯವಸ್ಥೆಯನ್ನು ಅಲುಗಾಡಿಸುತ್ತಿದೆ. ಸದ್ಯ ಸೋಂಕು ನಿಯಂತ್ರಣಕ್ಕೆ ಲಸಿಕೆಯೇ ಪರಿಣಾಮಕಾರಿ ಮಾರ್ಗ ಎಂಬ ಅಭಿಪ್ರಾಯವನ್ನು ಬಹುತೇಕ ತಜ್ಞರು ವ್ಯಕ್ತಪಡಿಸಿದ್ದು, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಡುವೆ ಯುವ ಸಮೂಹ ಕೊರೊನಾ ಲಸಿಕೆ ತೆಗೆದುಕೊಳ್ಳಲಾರಂಭಿಸಿದರೆ ಇನ್ನೊಂದು ಸಮಸ್ಯೆ ಎದುರಾಗುವ ಸಾಧ್ಯತೆ ಕಂಡುಬಂದಿದೆ. ಕೊರೊನಾ ಲಸಿಕೆ ಪಡೆದ 28 ದಿನ ಯಾರೂ ರಕ್ತದಾನ ಮಾಡುವಂತಿಲ್ಲ ಎಂದು ವೈದ್ಯರು ಹೇಳಿದ್ದು, ಲಸಿಕೆ ಪಡೆಯುವುದಕ್ಕೂ ಮುನ್ನ ರಕ್ತದಾನ ಮಾಡಿ ರಕ್ತದ ಕೊರತೆ ನೀಗಿಸಿ ಎಂದು ರಕ್ತನಿಧಿ ಕೇಂದ್ರದಿಂದ ಜಾಗೃತಿ ಮೂಡಿಸಲಾಗುತ್ತಿದೆ.

ಮೊದಲ ಹಂತದಲ್ಲಿಲಾಕ್‌ಡೌನ್ ಆದಾಗ ಸಮಸ್ಯೆ ಆಗಿತ್ತು

ಕೊರೊನಾ ನಿಯಂತ್ರಣಕ್ಕಾಗಿ ಮೊದಲ ಹಂತದಲ್ಲಿ ಲಾಕ್‌ಡೌನ್ ಆದಾಗ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗದೇ ಸಮಸ್ಯೆ ಆಗಿತ್ತು. ಈ ಬಾರಿ ಫೆಬ್ರವರಿ ತಿಂಗಳಲ್ಲೂ ತೊಂದರೆ ಉಂಟಾಗಿತ್ತು. ಜತೆಗೆ, ಕೊರೊನಾ ಪಾಸಿಟಿವ್ ಆಗಿ ಗುಣಮುಖರಾದವರೂ ನಾನಾ ಕಾರಣಗಳಿಂದ ರಕ್ತದಾನ ಮಾಡುವಂತಿಲ್ಲವಾದ್ದರಿಂದ ರಕ್ತದ ಕೊರತೆ ಎದುರಾದರೆ ಸಮಸ್ಯೆ ಆಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯುವಕರು ಲಸಿಕೆ ಸ್ವೀಕರಿಸುವ ಮುನ್ನವೇ ರಕ್ತದಾನ ಮಾಡಿ ಎಂದು ವೈದ್ಯರು ಮನವಿ ಮಾಡಿದ್ದಾರೆ.

Tuesday, 17 November 2020

6 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ದುಷ್ಕರ್ಮಿಗಳು


– ಮಾಟ-ಮಂತ್ರಕ್ಕಾಗಿ ಬಾಲಕಿ ಬಲಿ
– ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಯೋಗಿ ಸೂಚನೆ

6 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ದುಷ್ಕರ್ಮಿಗಳು ಆಕೆಯ ಮೃತ ದೇಹದಿಂದ ಶ್ವಾಸಕೋಶವನ್ನು ತೆಗೆದುಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ದೀಪಾವಳಿಯಂದು ರಾತ್ರಿ ಘಟಾಂಪುರ ಪ್ರದೇಶದಿಂದ ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಈಕೆ ದುಷ್ಕರ್ಮಿಗಳ ಕೈಗೆ ಸಿಕ್ಕಿ ಅತ್ಯಾಚಾರಕ್ಕೊಳಗಾಗಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಿರುವ ದುಷ್ಕರ್ಮಿಗಳು ಶ್ವಾಸಕೋಶವನ್ನು ತೆಗೆದುಕೊಂಡಿದ್ದಾರೆ.

ಈ ಅಪಾರದದಲ್ಲಿ ಅಂಕುಲ್ ಕುರಿಲ್ (20) ಮತ್ತು ಬೀರನ್ (31) ಆರೋಪಿಗಳನ್ನು ಬಂಧಿಸಲಾಗಿದೆ. ಆಕೆಯ ಶ್ವಾಸಕೋಶವನ್ನು ತೆಗೆಯಲು ಪ್ರಮುಖ ಪಿತೂರಿ ನಡೆಸಿರುವ ಪರಶುರಾಮ್ ಕುರಿಲ್ ಮಾಟಗಾತಿ ನೀಡಲು ಈ ಕೃತ್ಯ ಎಸಗಿದ್ದಾರೆ. ಪರುಶುರಾಮ್ ಮತ್ತು ಆತನ ಪತ್ನಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬ್ರಜೇಶ್ ಶ್ರೀವಾಸ್ತವ ಹೇಳಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪರುಶುರಾಮ್, ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದನು. ಆದರೆ ತೀವ್ರವಾದ ವಿಚಾರಣೆಯನ್ನು ನಡೆಸಿದ ನಂತರ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪರಶುರಾಮ್ ಅವರು 1999 ರಲ್ಲಿ ವಿವಾಹವಾಗಿದ್ದನು. ಆದರೆ ಇದೂವರೆಗೆ ಮಗು ಆಗಿರಲಿಲ್ಲ. ಬ್ಲ್ಯಾಕ್ ಮ್ಯಾಜಿಕ್ ಮಾಡಲು ಶ್ವಾಸಕೋಶವನ್ನು ತೆಗೆದುಕೊಂಡು ಹೋಗಲಾಗಿದೆ. ಇದು ಮಹಿಳೆ ಮಗುವಿಗೆ ಜನ್ಮ ನೀಡಲು ಸಹಾಯ ಮಾಡುತ್ತದೆ. ಹಾಗಾಗಿ ಬಾಲಕಿಯಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದಿದ್ದಾರೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾಲಕಿಯನ್ನು ಅಪಹರಿಸಿ ಅವಳ ಶ್ವಾಸಕೋಶವನ್ನು ತೆಗೆಯುವಂತೆ ಪರಶುರಾಮ್ ತನ್ನ ಸೋದರಳಿಯ ಅಂಕುಲ್ ಮತ್ತು ಅವನ ಸ್ನೇಹಿತ ಬೀರನ್‍ನನ್ನು ಮನವೊಲಿಸಿದ್ದನು. ಒಂದು ದಿನ ಅತಿಯಾಗಿ ಕುಡಿದಿದ್ದ ಅಂಕುಲ್ ಮತ್ತು ಬೀರನ್ ರಾತ್ರಿ ಭದ್ರಾಸ್ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಪಟಾಕಿ ಖರೀದಿಸಲು ಹೊರಟಿದ್ದಾಗ ಬಾಲಕಿಯನ್ನು ಅಪಹರಿಸಿದ್ದಾರೆ. ನಂತರ ಬಾಲಕಿಯನ್ನು ಹತ್ತಿರದ ಕಾಡಿಗೆ ಕರೆದೊಯ್ದು ಆಕೆಯನ್ನು ಕೊಲ್ಲುವ ಮೊದಲು ಅತ್ಯಾಚಾರ ಮಾಡಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಘೋರ ಅಪರಾಧವನ್ನು ಗಮನಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕಸದೊಂದಿಗೆ 3 ಕೋಟಿ ಮೌಲ್ಯದ ಒಡವೆ ಬಿಸಾಕಿ ಪರದಾಡಿದ ಮಹಿಳೆ!


ಮುಂಬೈ: ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಮಹಿಳೆ ಕಸದ ಜೊತೆಗೆ ಸುಮಾರು 3 ಕೋಟಿ ರೂ. ಬೆಲೆಯ ಚಿನ್ನಾಭರಣವನ್ನೂ ಬಿಸಾಕಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ದೀಪಾವಳಿ ಅಂಗವಾಗಿ ಮಹಿಳೆ ರೇಖಾ ಸುಲೆಕರ್ ಮನೆಯನ್ನು ಸ್ವಚ್ಛಗೊಳಿಸಿದ್ದು, ಈ ವೇಳೆ ಸುಮಾರು 3 ಕೋಟಿ ರೂ.ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಸಹ ಬೇರೆಡೆ ಎತ್ತಿ ಇಟ್ಟಿದ್ದಾರೆ. ಬಳಿಕ ಕಸ ಸಂಗ್ರಹಿಸುವ ವಾಹನಕ್ಕೆ ನೀಡಿದ್ದಾರೆ. ಬಳಿಕ ರೇಖಾ ಅವರಿಗೆ ಅರಿವಾಗಿದ್ದು, ಕಸದ ಜೊತೆಗೆ ಬೆಲೆ ಬಾಳುವ ಒಡವೆ ತುಂಬಿದ್ದ ಚೀಲವನ್ನೂ ಹಾಕಿರುವುದು ನೆನಪಾಗಿದೆ

ಚಿನ್ನವನ್ನು ಹಾಕಿರುವುದು ಅರಿವಿಗೆ ಬರುತ್ತಿದ್ದಂತೆ ಕುಟುಂಬದವರು ಪಿಸಿಎಂಸಿ(ಪಿಂಪ್ರಿ-ಚಿಂಚವಾಡ ಮುನ್ಸಿಪಲ್ ಕಾರ್ಪೋರೇಶನ್) ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಬ್ಯಾಗ್ ಹಾಕಲು ವಾಹನ ಕಸದ ಡಂಪಿಂಗ್ ಯಾರ್ಡ್‍ಗೆ ತೆರಳಿದ್ದು, ನೀವೂ ಅಲ್ಲಿಗೆ ಹೋಗಿ ಎಂದು ಸೂಚಿಸಿದ್ದಾರೆ. ಬಳಿಕ ಕುಟುಂಬಸ್ಥರು ಅಲ್ಲಿಗೆ ತೆರಳಿದ್ದಾರೆ. ಅಲ್ಲದೆ ಪಿಸಿಎಂಸಿ ಉದ್ಯೋಗಿ ಒಂದು ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ್ದು, ಅಂತಿಮವಾಗಿ ಬೆಲೆಬಾಳುವ ಒಡವೆಗಳು ತುಂಬಿದ್ದ ಬ್ಯಾಗ್‍ನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಬ್ಯಾಗ್‍ನ್ನು ಸುರಕ್ಷಿತವಾಗಿ ಮಾಲೀಕರಿಗೆ ತಲುಪಿಸಿದ್ದಾರೆ.

Monday, 16 November 2020

ಕರ್ನಾಟಕದಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ಎತ್ತರದ ಹನುಮಾನ್ ಪ್ರತಿಮೆ.

ಹನುಮಂತನ ಜನ್ಮ ಸ್ಥಳವಾದ ಕಿಷ್ಕಿಂಧಾದಲ್ಲಿ ವಿಶ್ವದ ಅತಿ ಎತ್ತರದ ಹನುಮಂತನ ವಿಗ್ರಹ ಪ್ರತಿಷ್ಠಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹನುಮಂತನ ಜನ್ಮ ಸ್ಥಳ  ಹಂಪಿ ಬಳಿಯ ಕಿಷ್ಕಿಂಧಾದಲ್ಲಿ  ಹನುಮದ್ ಜನ್ಮಭೂಮಿ ಟ್ರಸ್ಟ್‌ 1200ರೂ ಕೋಟಿ ವೆಚ್ಚದಲ್ಲಿ 215 ಮೀಟರ್ ಎತ್ತರದ ಭವ್ಯ ಮೂರ್ತಿಯನ್ನು ನಿರ್ಮಿಸಲು ಮುಂದಾಗಿದೆ.

ಅಯೋಧ್ಯೆಯಲ್ಲಿ ರಾಮನ ಮೂರ್ತಿ 221 ಮೀಟರ್ ಎತ್ತರವಿರಲಿದ್ದು, ಹಂಪಿಯಲ್ಲಿ ನಿರ್ಮಾಣವಾಗಲಿರುವ ರಾಮ ಭಕ್ತ ಭಜರಂಗಿಯ ವಿಗ್ರಹ 215 ಮೀಟರ್ ಎತ್ತರವಿರಲಿದೆ. ಈಗಾಗಲೇ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಮುಂದಿನ ಆರು ವರ್ಷಗಳಲ್ಲಿ ಮೂರ್ತಿ ಪ್ರತಿಷ್ಟಾಪನೆಯ ಕಾರ್ಯವನ್ನು ಪೂರ್ಣಗೊಳಿಸಲು ಟ್ರಸ್ಟ್‌ ನಿರ್ಧರಿಸಿದೆ.

ಸದ್ಯ ಅಂಜನಾದ್ರಿ ಬೆಟ್ಟದಲ್ಲಿ ಹನುಮಂತನ ವಿಗ್ರಹ ಇದ್ದು ಇದೇ ಮಾದರಿಯಲ್ಲಿ 215 ಮೀಟರ್ ಎತ್ತರದ ವಿಗ್ರಹ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಭಕ್ತರು ಅಂಜನಾದ್ರಿ ಬೆಟ್ಟದ ಹನುಮಂತ ದೇವರನ್ನು ನೋಡಬೇಕೆಂದರೆ ಸುಮಾರು 550 ಮೆಟ್ಟಿಲು ಹತ್ತಬೇಕಾಗಿದೆ. ಆದರೆ ಈಗ ನಿರ್ಮಾಣ ಮಾಡುತ್ತಿರುವ ವಿಗ್ರಹವನ್ನು ಭಕ್ತರು ನೋಡಲು ಅನುಕೂಲವಾಗುವಂತೆ ಎಲಿವೇಟರ್ ನಿರ್ಮಾಣ ಮಾಡುವ ಯೋಜನೆ ಸಹ ಇದೆ. ಅಂದುಕೊಂಡ ಹಾಗೆ ಈ ಯೋಜನೆ ಮುಂದಿನ ಆರು ವರ್ಷದಲ್ಲಿ ಪೂರ್ಣಗೊಂಡರೆ ಹಂಪಿಯಲ್ಲಿ ಮತ್ತೊಂದು ಇತಿಹಾಸ ನಿರ್ಮಾಣವಾಗಲಿದೆ.

Tuesday, 20 October 2020

ಅನಂತಪುರದ ಜಿಲ್ಲಾಧಿಕಾರಿಯಾದ ಹದಿನಾರು ವರ್ಷದ ಬಾಲಕಿ.!!

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು ದಿನದ ಜಿಲ್ಲಾಧಿಕಾರಿ ಆಗಿ 16 ವರ್ಷದ ಬಾಲಕಿ ಕರ್ತವ್ಯ ನಿರ್ವಹಿಸಿರುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.
16 ವರ್ಷದ ಬಾಲಕಿ ಎಂ ಶ್ರಾವಣಿ ಎಂಬ ಬಾಲಕಿ ಅನಂತಪುರದ ಜಿಲ್ಲಾಧಿಕಾರಿಯಾಗಿ ಅಕ್ಟೋಬರ್ 11 ನೇ ತಾರೀಖಿನಂದು ಕಾರ್ಯ ನಿರ್ವಹಿಸಿದ್ದಾರೆ. ಈ ಕುರಿತು ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಮಾಹಿತಿ ಬಹಿರಂಗಪಡಿಸಿದ್ದಾರೆ‌. ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಯ ಮುಖ್ಯಸ್ಥೆಯಾಗಿ ಒಂದು ದಿನ ಕಾರ್ಯ ನಿರ್ವಹಿಸುವ ಅವಕಾಶವನ್ನು ಬಾಲಕಿಗೆ ನೀಡಲಾಗಿತ್ತು ಎಂದು ಸಚಿವರು ಹೇಳಿದ್ದಾರೆ.

ಅನಂತಪುರದ ಜಿಲ್ಲಾಧಿಕಾರಿ ಗಂಧಮ್ ಚಂದ್ರುಡು ರವರ ಅತ್ಯಂತ ಹಿಂದುಳಿದಿರುವ ಹೆಣ್ಣು ಮಕ್ಕಳನ್ನು ಉತ್ತೇಜಿಸುವ ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಆತ್ಮವಿಶ್ವಾಸಗಳಿಸುವ , ಹೆಣ್ಣು ಮಕ್ಕಳೆ ನಮ್ಮ ಭವಿಷ್ಯ ಎಂಬ ಕಲ್ಪನೆಯಡಿ ಬಾಲಕಿ ಶ್ರಾವಣಿ ಜಿಲ್ಲಾಧಿಕಾರಿಯಾಗುವ ಅವಕಾಶ ಪಡೆದಿದ್ದರು.

ಒಂದು ದಿನದ ಜಿಲ್ಲಾಧಿಕಾರಿಯಾಗಿದ್ದ ಶ್ರಾವಣಿ SC/ST ದೌರ್ಜನ್ಯ ಕಾಯ್ದೆಯಡಿ ಸಂತ್ರಸ್ತ ಬಾಲಕಿಯೊಬ್ಬಳಿಗೆ 25 ಸಾವಿರ ಮಂಜೂರುಗೊಳಿಸಿದ್ದಾರೆ. ಮಹಿಳಾ ಆಧಿಕಾರಿಗಳಿಗೆ ರಾತ್ರಿ 8 ರಿಂದ ಬೆಳಗ್ಗೆ 8 ಘಂಟೆಯ ತನಕ ಮಹಿಳಾ ಆಧಿಕಾರಿಗಳು ಕರೆ ಸ್ವೀಕರಿಸುವುದರಿಂದ ವಿನಾಯಿತಿ ಅದೇಶಕ್ಕೂ ಸಹಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಗರದಲ್ಲಿ ಹದಗೆಟ್ಟು ನಿಂತಿರುವ ರಸ್ತೆಗಳನ್ನು ಶೀಘ್ರವಾಗಿ ಸರಿಪಡಿಸುವಂತೆ ಆದೇಶ ಮಾಡಿದ್ದಾರೆ.

Monday, 19 October 2020

ಅಡಿಕೆ ಸುಲಿಯುವುದರಲ್ಲೂ ದಾಖಲೆ!ಎನ್.ವಿ. ರಮೇಶ್

ಬಸವಾಪಟ್ಟಣ: ಇಲ್ಲಿಯ ಶೃಂಗಾರ್ ಬಾಗ್ ತಾಂಡಾದ ಬಡ ಕೂಲಿಕಾರ ದಂಪತಿ ರುದ್ರಾ ನಾಯ್ಕ–ಜಯಾಬಾಯಿ ಅವರ ಮಗಳು ಆರ್. ಶಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತ ಬಿಡುವಿನ ವೇಳೆಯಲ್ಲಿ ಅಡಿಕೆ ಸುಲಿಯುವ ಕೆಲಸದಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಸಾಮಾನ್ಯವಾಗಿ ಅಡಿಕೆ ಸುಲಿಯುವ ಕೂಲಿಕಾರರಲ್ಲಿ ಹೆಚ್ಚಾಗಿ ಮಹಿಳೆಯರೇ ಇರುತ್ತಾರೆ. 15 ಲೀಟರ್ ಗಾತ್ರದ ಡಬ್ಬದಲ್ಲಿ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ದಿನಕ್ಕೆ ಹೆಚ್ಚೆಂದರೆ 5 ಡಬ್ಬ ಅಡಿಕೆ ಸುಲಿಯುತ್ತಾರೆ. ಆದರೆ ಶಾಂತಾ 8ರಿಂದ 9 ಡಬ್ಬಗಳವರೆಗೆ ಅಡಿಕೆ ಸುಲಿದು ದಿನಕ್ಕೆ ₹ 800ರಿಂದ ₹ 900ರವರೆಗೆ ಗಳಿಸುತ್ತಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ರಜೆಯ ದಿನಗಳಲ್ಲಿ ತಾಯಿ ಜಯಾಬಾಯಿ ಅವರೊಂದಿಗೆ ಅಡಿಕೆ ಸುಲಿಯುವ ಕೆಲಸದಲ್ಲಿ ತರಬೇತಿ ಪಡೆದ ಶಾಂತಾ, ಇಂದಿಗೂ ಕಾಲೇಜಿನ ರಜಾ ದಿನಗಳಲ್ಲಿ ಈ ಕಾಯಕವನ್ನು ಮುಂದುವರಿಸಿದ್ದಾರೆ.

ನಾನು ಸುಮಾರು 30 ವರ್ಷಗಳಿಂದ ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದು, ಈವರೆಗೆ 5ರಿಂದ 6 ಡಬ್ಬ ಅಡಿಕೆ ಸುಲಿಯುವುದರೊಳಗೆ ಸುಸ್ತಾಗುತ್ತದೆ. ಆದರೆ, ಶಾಂತಾ ಅಡಿಕೆ ಸುಲಿಯುವ ವೇಗ ನೋಡಿ ಅಚ್ಚರಿಯಾಗುತ್ತದೆ. ಕಾಲೇಜಿನಲ್ಲಿ ಓದುತ್ತಿದ್ದರೂ ಸ್ವಲ್ಪವೂ ಹಿಂಜರಿಯದೇ ಓದಿನೊಂದಿಗೆ ಈ ಕಾರ್ಯದಲ್ಲಿ ತೊಡಗಿ ಸಂಸಾರಕ್ಕೆ ನೆರವಾಗುತ್ತ ಇತರ ಯುವತಿಯರಿಗೆ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಜಯಮ್ಮ.

ಶಾಂತಾ ಅವರು ಹಲವು ವರ್ಷಗಳಿಂದ ಅಡಿಕೆ ಸುಲಿಯುವ ಕೆಲಸಕ್ಕಾಗಿ ನಮ್ಮಲ್ಲಿಗೆ ಬರುತ್ತಿದ್ದು, ಯಂತ್ರದಂತೆ ಓಡುವ ಅವರ ಕೈಗಳಲ್ಲಿ ಹಸಿ ಅಡಿಕೆ ಸುಲಿಯುವ ಕಾರ್ಯ ಮೆಚ್ಚುವಂಥದ್ದು’ ಎನ್ನುತ್ತಾರೆ ಅಡಿಕೆ ಬೆಳೆಗಾರ ಕೆ.ರುದ್ರಪ್ಪ.

ಸರ್ಕಾರಿ ಶಾಲೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಶಾಂತಾ, ಇಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ನಂತರ ಇಲ್ಲಿಯ ಎಲ್.ಸಿದ್ಧಪ್ಪ ಪಿ.ಯು. ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಹ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಗ ಇಲ್ಲಿಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಪದವಿಯ ನಂತರ ಬಿ.ಇಡಿ ಪದವಿ ಗಳಿಸಿ ಶಿಕ್ಷಕಿಯಾಗಬೇಕು ಎನ್ನುವುದು ಅವರ ಇಚ್ಛೆ. ತಂದೆ–ತಾಯಿಗೆ ಸ್ವಂತ ಮನೆ ಮಾಡಿಕೊಡಬೇಕು ಎಂಬ ಹಂಬಲವನ್ನೂ ಹೊಂದಿದ್ದಾರೆ.

ಮಾಹಿತಿ ಕೃಪೆ: ಮೈಸೂರು ಫಾರ್ಮರ್ಸ ಅಸೋಸಿಯೇಷನ್

Sunday, 18 October 2020

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರವನ್ನು ನೀಡಲು ಸರಕಾರದ ಸೂಚನೆ!


ಬೆಂಗಳೂರು: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರವನ್ನು ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಕುರಿತು ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.


ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಪ್ರತಿದಿನವೂ ಸಮಯಕ್ಕೆ ಸರಿಯಾಗಿ ಈ ಕೆಳಕಂಡಂತೆ ಆಹಾರ ಪೂರೈಕೆ ಮಾಡಲು ಸೂಚಿಸಿದೆ.


ನೌಕಾಪಡೆಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷೆ ಯಶಸ್ವಿ.

ನೌಕಾಪಡೆಯ ಸ್ಥಳೀಯವಾಗಿ ನಿರ್ಮಿಸಲಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಕಟಣೆಯಲ್ಲಿ ತಿಳಿಸಿದೆ.


ಅರೇಬಿಯನ್ ಸಮುದ್ರದಲ್ಲಿ ಐಎನ್ಎಸ್ ಚೆನ್ನೈನಿಂದ ಹಾರಿಸಲ್ಪಟ್ಟ ಕ್ಷಿಪಣಿ ಉನ್ನತ ಮಟ್ಟದ ಮತ್ತು ಅತ್ಯಂತ ಸಂಕೀರ್ಣವಾದ ಕುಶಲ ಪಿನ್-ಪಾಯಿಂಟ್ ನಿಖರತೆಯೊಂದಿಗೆ ಗುರಿಯನ್ನು ಯಶಸ್ವಿಯಾಗಿ ಹೊಡೆದಿದೆ.


ನೌಕಾ ಮೇಲ್ಮೈ ಗುರಿಗಳನ್ನು ದೀರ್ಘ ವ್ಯಾಪ್ತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುದ್ಧನೌಕೆಯ  ಬ್ರಹ್ಮೋಸ್ ಅವಿಭಾಜ್ಯ ಮುಷ್ಕರ ಆಯುಧವಾಗಿ ಖಚಿತಪಡಿಸುತ್ತದೆ ಎಂದು ಡಿಆರ್‌ಡಿಒ ತಿಳಿಸಿದೆ.


ಬಹುತೇಕ ಬಹುಮುಖ ಬ್ರಹ್ಮೋಸ್ ಅನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ, ಬ್ರಹ್ಮೋಸ್ ಮತ್ತು ಭಾರತೀಯ ನೌಕಾಪಡೆಯ ಯಶಸ್ವಿ ಉಡಾವಣೆಯನ್ನು ಅಭಿನಂದಿಸಿದರು.

ಚಳಿಗಾಲದಲ್ಲಿ ಕೊರೊನಾ 2ನೇ ಅಲೆ ಏಳುವ ಆತಂಕ..!!

ದೇಶದಲ್ಲಿ ಕಳೆದ 2-3 ವಾರಗಳಿಂದ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಮುಖ ಕಂಡಿರಬಹುದು. ಆದರೆ ಚಳಿಗಾಲದಲ್ಲಿ ಎರಡನೇ ಅಲೆ  ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎನ್ ಇ ಜಿ ವಿ ಎ ಸಿ ಎಚ್ಚರಿಕೆ ನೀಡಿದೆ.


ಕಳೆದ ಮೂರು ವಾರಗಳಿಂದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಕರ್ನಾಟಕ , ಕೇರಳ, ರಾಜಸ್ಥಾನ, ಛತ್ತೀಸ್ಗಢ, ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಏರುತ್ತಲೇ ಇದೆ.


ಕೋವಿಡ್  ಸುರಕ್ಷಾ  ಕ್ರಮಗಳನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದರೆ ದೇಶದಲ್ಲಿ ಎರಡನೇ ಬಾರಿಗೆ ಕೋವಿಡ್ ಅಲೆ ಅಪ್ಪಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಕೊರೊನಾ ನಿರ್ವಹಣೆ ಸಮನ್ವಯ ಸಮಿತಿಯ ಮುಖ್ಯಸ್ಥರಾದ ವಿ. ಕೆ ಪೌಲ್ ಹೇಳಿದ್ದಾರೆ.


ಚಳಿಗಾಲದಲ್ಲಿ ವೈರಸ್ ಹೆಚ್ಚು ಹಬ್ಬುತ್ತದೆ. ಇದಕ್ಕೆ ಉದಾಹರಣೆ ಬ್ರಿಟನ್ ನಲ್ಲಿ ಚಳಿಗಾಲ ಶುರುವಾದ ಮೇಲೆ  ಸೋಂಕಿನ ಪ್ರಮಾಣ 40 ಶೇಕಡಾದಷ್ಟು ಹೆಚ್ಚಿದೆ.


ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆ ಇದ್ದವರಿಗೆ ಸಮಸ್ಯೆ ಹೆಚ್ಚು. ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಮತ್ತಷ್ಟು ಅನ್ ಲಾಕ್ ಮಾಡುವ ಸಾಧ್ಯತೆ ಹೆಚ್ಚಾಗಿದ್ದು ಜನರ ಓಡಾಟವು ಹೆಚ್ಚಬಹುದು. ಜನರು ಮುಂಬರುವ ದಿನಗಳಲ್ಲಿ ಅತ್ಯಂತ ಜಾಗರೂಕರಾಗಿ ಇರಬೇಕು, ಇಲ್ಲದಿದ್ದರೆ ಅಪಾಯ  ತಾವೇ ಬರಮಾಡಿಕೊಂಡಂತೆ ಎಂದು ಎಚ್ಚರಿಸಿದ್ದಾರೆ.

ಐದು ಸಾವಿರ ರೂ.ಗಿಂತ ಕಡಿಮೆ ದರದಲ್ಲಿ 5ಜಿ ಸ್ಮಾರ್ಟ್ ಫೋನ್

ಮೊಬೈಲ್ ಪ್ರಿಯರಿಗೆ ರಿಲಯನ್ಸ್ ಜಿಯೋ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಐದು ಸಾವಿರ ರೂ.ಗಿಂತ ಕಡಿಮೆ ದರದಲ್ಲಿ 5ಜಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ತರಲು ರಿಲಯನ್ಸ್ ಜಿಯೋ ಯೋಜನೆ ರೂಪಿಸಿದೆ.


ರಿಲಯನ್ಸ್ ಜಿಯೋ 5ಜಿ ಫೋನ್ ನ ಬೆಲೆಯನ್ನು 2,500 ರೂ. ರಿಂದ 3000 ರೂ. ಗೆ ಇಳಿಸಲು ನಿರ್ಧರರಿಸಲಾಗಿದ್ದು, ಸದ್ಯ 2ಜಿ ಸಂಪರ್ಕದ ಮೊಬೈಲ್ ಗಳನ್ನು ಬಳಸುತ್ತಿರುವ ಸುಮಾರು 30 ಕೋಟಿ ಜನರನ್ನು ಗುರಿಯಾಗಿಸಿಕೊಂಡು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ತಯಾರಿಕೆಗೆ ಜಿಯೋ ಯೋಜನೆ ಕೈಗೊಳ್ಳುತ್ತಿದೆ ಎನ್ನಲಾಗಿದೆ.

ಸಿದ್ಧಗಂಗಾ ಮಠದ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳು ಸ್ವಯಂ ಕ್ವಾರಂಟೈನ್

ಕೊರೋನಾ ಕೋಂಕಿಗೆ ಒಳಗಾದಂತಹ ವ್ಯಕ್ತಿಯ ಸಂಪರ್ಕಕ್ಕೆ ಬಂದ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಸಿದ್ಧಗಂಗಾ ಮಠದ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳು ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಅಲ್ಲದೇ ಪೂಜೆ, ಸಮಾರಂಭಗಳಲ್ಲಿ ಭಾಗವಹಿಸದೇ ಇರಲು ಸಹ ತೀರ್ಮಾನ ಕೈಗೊಂಡಿದ್ದಾರೆ.

ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಂತ ಜಿಎಸ್ ಸೋಮಶೇಖರ್ ಅವರು ಅಕ್ಟೋಬರ್ 15ರಂದು ಮೃತಪಟ್ಟಿದ್ದರು. ಇಂತಹ ಸೋಮಶೇಖರ್ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು.

ಇಂತಹ ಸೋಮಶೇಖರ್ ಅವರೊಂದಿಗೆ ಸಂಪರ್ಕ ಹೊಂದಿ, ಮೃತರ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿದ್ದರಿಂದಾಗಿ, ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಅಲ್ಲದೇ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭ ಹಾಗೂ ಪೂಜಾ ಕೈಂಕರ್ಯದಲ್ಲೂ ತೊಡಗಿಸಿಕೊಳ್ಳಂದಂತ ನಿರ್ಧಾರ ಕೈಗೊಂಡಿದ್ದಾರೆ.

Saturday, 17 October 2020

ವಿಶ್ವದಾದ್ಯಂತ 4 ಕೋಟಿಯತ್ತ ಸಾಗಿದ ಕೋವಿಡ್ 19 ಪ್ರಕರಣ: ಅಗ್ರಸ್ಥಾನದಲ್ಲಿ ಭಾರತ-ಅಮೆರಿಕಾ​

ಪ್ರಪಂಚದಲ್ಲಿ ಬರೋಬ್ಬರಿ 3,95,93,953 ಜನರಿಗೆ ಮಾರಣಾಂತಿಕ​ ಕೊರೊನಾ ವೈರಸ್​ ಅಂಟಿದ್ದು, 11,09,252 ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಸುಮಾರು 3 ಕೋಟಿ (2,96,61,167) ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 82,88,278 ಇದ್ದು, ಮೃತರ ಸಂಖ್ಯೆ 2,23,644ಕ್ಕೆ ಏರಿಕೆಯಾಗಿದೆ.ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 74,32,680 ಕೇಸ್​ಗಳು ಪತ್ತೆಯಾಗಿದ್ದು, 1,13,032 ಜನರು ವೈರಸ್​ಗೆ ಬಲಿಯಾಗಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 52,01,570 ಪ್ರಕರಣಗಳು ಹಾಗೂ 1,53,229 ಸಾವುಗಳು ವರದಿಯಾಗಿವೆ.4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 13,69,313 ಕೇಸ್​​ಗಳಿದ್ದು, 23,723 ಜನರು ಸಾವನ್ನಪ್ಪಿದ್ದಾರೆ.

ಕಾರೊಂದು ಹಳ್ಳಕ್ಕೆ ಬಿದ್ದು ಕೊಚ್ಚಿಹೋಗಿದ್ದು ನಾಲ್ವರು

ಸಿದ್ದಾಪುರ: ಹೆಗ್ಗರಣಿ ಬಳಿ ಕಾರೊಂದು ಹಳ್ಳಕ್ಕೆ ಬಿದ್ದು ಕೊಚ್ಚಿಹೋಗಿದ್ದು ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
 ಹುಬ್ಬಳ್ಳಿ ಮೂಲದ ಅಕ್ಷತಾ, ನಿಶ್ಚಲ್, ಸುಷ್ಮಾ ಹಾಗೂ ರೋಷನ್ ಎಂಬುವವರು ಮೃತಪಟ್ಟಿದ್ದಾರೆನ್ನಲಾಗುತ್ತಿದೆ. ಉಂಚಳ್ಳಿ ಜಲಪಾತ ವೀಕ್ಷಿಸಿ ಊರಿಗೆ ವಾಪಸ್ಸಾಗುತ್ತಿದ್ದ ಹುಬ್ಬಳ್ಳಿ ಮೂಲದ ಆರು ಮಂದಿ ಇದ್ದ ಕಾರ ಕೋಡ್ನಮನೆ ಎಂಬಲ್ಲಿ ಸೇತುವೆಯಿಂದ ಕೆಳಗುರುಳಿದೆ. ಕಾರು ನೀರಿನಲ್ಲೇ ಅರ್ಧ ಕಿಲೋ ಮೀಟರ್ ದೂರ ಹೋಗಿ ಬಿದ್ದಿದ್ದು, ಗುರುವಾರ ಮಧ್ಯಾಹ್ನದ ಹೊತ್ತಿಗೆ ಘಟನೆ ಬೆಳಕಿಗೆ ಬಂದಿದೆ.