Tuesday, 20 October 2020

ಅನಂತಪುರದ ಜಿಲ್ಲಾಧಿಕಾರಿಯಾದ ಹದಿನಾರು ವರ್ಷದ ಬಾಲಕಿ.!!

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು ದಿನದ ಜಿಲ್ಲಾಧಿಕಾರಿ ಆಗಿ 16 ವರ್ಷದ ಬಾಲಕಿ ಕರ್ತವ್ಯ ನಿರ್ವಹಿಸಿರುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.
16 ವರ್ಷದ ಬಾಲಕಿ ಎಂ ಶ್ರಾವಣಿ ಎಂಬ ಬಾಲಕಿ ಅನಂತಪುರದ ಜಿಲ್ಲಾಧಿಕಾರಿಯಾಗಿ ಅಕ್ಟೋಬರ್ 11 ನೇ ತಾರೀಖಿನಂದು ಕಾರ್ಯ ನಿರ್ವಹಿಸಿದ್ದಾರೆ. ಈ ಕುರಿತು ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಮಾಹಿತಿ ಬಹಿರಂಗಪಡಿಸಿದ್ದಾರೆ‌. ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಯ ಮುಖ್ಯಸ್ಥೆಯಾಗಿ ಒಂದು ದಿನ ಕಾರ್ಯ ನಿರ್ವಹಿಸುವ ಅವಕಾಶವನ್ನು ಬಾಲಕಿಗೆ ನೀಡಲಾಗಿತ್ತು ಎಂದು ಸಚಿವರು ಹೇಳಿದ್ದಾರೆ.

ಅನಂತಪುರದ ಜಿಲ್ಲಾಧಿಕಾರಿ ಗಂಧಮ್ ಚಂದ್ರುಡು ರವರ ಅತ್ಯಂತ ಹಿಂದುಳಿದಿರುವ ಹೆಣ್ಣು ಮಕ್ಕಳನ್ನು ಉತ್ತೇಜಿಸುವ ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಆತ್ಮವಿಶ್ವಾಸಗಳಿಸುವ , ಹೆಣ್ಣು ಮಕ್ಕಳೆ ನಮ್ಮ ಭವಿಷ್ಯ ಎಂಬ ಕಲ್ಪನೆಯಡಿ ಬಾಲಕಿ ಶ್ರಾವಣಿ ಜಿಲ್ಲಾಧಿಕಾರಿಯಾಗುವ ಅವಕಾಶ ಪಡೆದಿದ್ದರು.

ಒಂದು ದಿನದ ಜಿಲ್ಲಾಧಿಕಾರಿಯಾಗಿದ್ದ ಶ್ರಾವಣಿ SC/ST ದೌರ್ಜನ್ಯ ಕಾಯ್ದೆಯಡಿ ಸಂತ್ರಸ್ತ ಬಾಲಕಿಯೊಬ್ಬಳಿಗೆ 25 ಸಾವಿರ ಮಂಜೂರುಗೊಳಿಸಿದ್ದಾರೆ. ಮಹಿಳಾ ಆಧಿಕಾರಿಗಳಿಗೆ ರಾತ್ರಿ 8 ರಿಂದ ಬೆಳಗ್ಗೆ 8 ಘಂಟೆಯ ತನಕ ಮಹಿಳಾ ಆಧಿಕಾರಿಗಳು ಕರೆ ಸ್ವೀಕರಿಸುವುದರಿಂದ ವಿನಾಯಿತಿ ಅದೇಶಕ್ಕೂ ಸಹಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಗರದಲ್ಲಿ ಹದಗೆಟ್ಟು ನಿಂತಿರುವ ರಸ್ತೆಗಳನ್ನು ಶೀಘ್ರವಾಗಿ ಸರಿಪಡಿಸುವಂತೆ ಆದೇಶ ಮಾಡಿದ್ದಾರೆ.

No comments:

Post a Comment