ಮೊನ್ನೆಯಷ್ಟೇ ಮೇಘನಾ ಅವರ ಸೀಮಂತ ಕಾರ್ಯಕ್ರಮ ನಡೆದು, ಅಲ್ಲಿಗೆ ಹೋಗಿದ್ದ ಧೃವ ಅತ್ತಿಗೆಗೆ ಶುಭ ಹಾರೈಸಿ, ಭಾವುಕರಾಗಿದ್ದರು. ಮೇಘನಾ ಕೂಡಾ ತನ್ನ ಜೊತೆ ಭಾವನಾತ್ಮಕವಾಗಿ ಬೆಸೆದಿರುವ ಧೃವ ಅವರ ಜನ್ಮದಿನಕ್ಕೆ ಅವರಿಗೆ ಶುಭ ವನ್ನು ಕೋರಿ, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡು, ಧೃವ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ಮೇಘನಾ ಅವರು ಫೋಟೊ ದೊಂದಿಗೆ ಕೆಲವು ಅರ್ಥಗರ್ಭಿತ ಸಾಲುಗಳನ್ನು ಕೂಡಾ ಬರೆದುಕೊಂಡಿದ್ದಾರೆ.
ನನ್ನೊಂದಿಗೆ ನೀನು ಹೇಗೆ ಸದಾ ನಿಂತಿರುವೆಯೋ, ನಿನ್ನೊಂದಿಗೆ ನಾನು ಕೂಡಾ ಹಾಗೆ ಸದಾ ನಿಂತಿರುತ್ತೇನೆ. ಮೈ ಡಿಯರ್ ಬಾಯ್ ಬರ್ತ್ ಡೇ ಬಾಯ್ ಎನ್ನುತ್ತಾ, ನಾನು ನಿನಗೆ ಸದಾ ಸಂತೋಷವೇ ಸಿಗಲಿ ಎಂದು ಹಾರೈಸುತ್ತೇನೆ. ಚಿರು ರೀತಿಯಲ್ಲೇ ಸದಾ ನಗುತ್ತಿರಬೇಕು, ಸಂತೋಷದ ಜನ್ಮದಿನಕ್ಕೆ ಶುಭಾಶಯ ಗಳು ಎಂದು ಮೇಘನಾ ಅವರು ಬರೆದು ಪೋಸ್ಟ್ ಮಾಡುವ ಮೂಲಕ ಧೃವ ಸರ್ಜಾ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರಿದ್ದಾರೆ.
No comments:
Post a Comment