ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಅವರು ಆಗಾಗ ವಿನೇಶ್ ದರ್ಶನ್ ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಕುರಿತಾದ ಸಿಹಿಸುದ್ದಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹೌದು.. ದರ್ಶನ್ ಸಿನಿಮಾ ಮೂಲಕ ಮಾತ್ರವಲ್ಲದೆ ಅವರ ಸರಳ ಸಜ್ಜನಿಕೆಯ ನಡತೆಯಿಂದ, ಮತ್ತು ಕಷ್ಟದಲ್ಲಿರುವವರಿಗೆ ನೆರವಾಗುವುದರಿಂದ ಜನರ ಮನ ಗೆದ್ದಿದ್ದಾರೆ. ಇತ್ತ ವಿಜಯಲಕ್ಷ್ಮಿ ದರ್ಶನ್ ಅವರು ಮೈ ಫ್ರೆಶ್ ಬ್ಯಾಸ್ಕೆಟ್ ಆನ್ಲೈನ ಆಪನ್ನು ತೆರೆದು ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡುವ ಮತ್ತು ಗ್ರಾಹಕರಿಗೆ ರೈತರಿಂದ ನೇರವಾಗಿ ಹಣ್ಣುಗಳು ತರಕಾರಿಗಳು ದೊರಕುತ್ತಿರುವಂತೆ ಅನೇಕರಿಗೆ ನೆರವಾಗಿದ್ದಾರೆ.

No comments:
Post a Comment