Showing posts with label Film. Show all posts
Showing posts with label Film. Show all posts

Wednesday, 14 October 2020

ನಾಳೆಯಿಂದ ಕರ್ನಾಟಕದಲ್ಲಿ ‘ಚಿತ್ರಮಂದಿರ’ ಓಪನ್: ಸರಕಾರದಿಂದ ಮಾರ್ಗಸೂಚಿ ಪ್ರಕಟ

 ಬೆಂಗಳೂರು: ಕೊರೋನಾ ಸೋಂಕಿನಿಂದ ಏರಲ್ಪಟ್ಟ ಲಾಕ್ ಡೌನ್ ಯಿಂದ ಮುಚ್ಚಲ್ಪಟ್ಟ ಚಿತ್ರಮಂದಿರಗಳು ನಾಳೆಯಿಂದ ತೆರೆಯಲಿವೆ. ಈ ಹಿನ್ನೆಲೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.



ಚಿತ್ರಮಂದಿರಗಳು ಅರ್ಧ ಮಾತ್ರ ಭರ್ತಿ ಆಗಬೇಕು. ಕಂಟೈನ್ಮೆಂಟ್ ವಲಯಗಳಲ್ಲಿ ಚಿತ್ರಮಂದಿರ ತೆರೆಯುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಈ ಮಾರ್ಗಸೂಚಿಗಳು ಚಿತ್ರಮಂದಿರಗಳು, ರಂಗಮಂದಿರಗಳು, ಮಲ್ಟಿ ಪ್ಲೆಕ್ಸ್​ಗಳಿಗೆ ಅನ್ವಯವಾಗುತ್ತವೆ.

ಮಾರ್ಗಸೂಚಿಯ ಮುಖ್ಯಾಂಶಗಳು:

ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಡ್ಡಾಯ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಮಂದಿರದ ಒಳಗೆ ಉಗುಳುವುದು ನಿಷಿದ್ಧ, ಸಿನಿಮಾ ಹಾಲ್ ಒಳಗೆ ಆಹಾರ ಸೇವನೆ ನಿಷಿದ್ಧ, ವೀಕ್ಷಕರಿಗೆ ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯ, ಪ್ಯಾಕ್ ಆಗಿರುವ ಆಹಾರ, ಸ್ನ್ಯಾಕ್ಸ್ ಗಳ ಮಾರಾಟ, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ, ರೋಗಲಕ್ಷಣ ರಹಿತ ವ್ಯಕ್ತಿಗಳಿಗೆ ಮಾತ್ರ ಮಂದಿರದ ಒಳಗೆ ಪ್ರವೇಶ, ಟಿಕೆಟ್​ಗೆ ಹಣಪಾವತಿಗೆ ಡಿಜಿಟಲ್ ಪೇಮೆಂಟ್​ಗೆ ಆದ್ಯತೆ, ಟಿಕೆಟ್ ವಿತರಿಸುವಾಗ ವೀಕ್ಷಕರ ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಬೇಕು.

Monday, 12 October 2020

ಸಂತೋಷದ ವಿಷಯ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್..! ಅದೇನ್ ಗೊತ್ತಾ?

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಅವರು ಆಗಾಗ ವಿನೇಶ್ ದರ್ಶನ್ ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಕುರಿತಾದ ಸಿಹಿಸುದ್ದಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹೌದು.. ದರ್ಶನ್ ಸಿನಿಮಾ ಮೂಲಕ ಮಾತ್ರವಲ್ಲದೆ ಅವರ ಸರಳ ಸಜ್ಜನಿಕೆಯ ನಡತೆಯಿಂದ, ಮತ್ತು  ಕಷ್ಟದಲ್ಲಿರುವವರಿಗೆ ನೆರವಾಗುವುದರಿಂದ ಜನರ ಮನ ಗೆದ್ದಿದ್ದಾರೆ. ಇತ್ತ ವಿಜಯಲಕ್ಷ್ಮಿ ದರ್ಶನ್ ಅವರು ಮೈ ಫ್ರೆಶ್ ಬ್ಯಾಸ್ಕೆಟ್ ಆನ್ಲೈನ ಆಪನ್ನು ತೆರೆದು ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡುವ ಮತ್ತು ಗ್ರಾಹಕರಿಗೆ ರೈತರಿಂದ ನೇರವಾಗಿ ಹಣ್ಣುಗಳು ತರಕಾರಿಗಳು ದೊರಕುತ್ತಿರುವಂತೆ ಅನೇಕರಿಗೆ ನೆರವಾಗಿದ್ದಾರೆ. 

ದರ್ಶನ್ ಅವರು ಒಂದು ರೀತಿಯಲ್ಲಿ ಕಷ್ಟದಲ್ಲಿರುವವರಿಗೆ ನೆರವಾದರೆ. ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಮತ್ತೊಂದು ರೀತಿಯಲ್ಲಿ ರೈತರಿಗೆ ನೆರವಾಗುತ್ತಿರುವುದು ಮೆಚ್ಚುವ ವಿಚಾರ. ದರ್ಶನ್ ಅವರು ಪ್ರಾಣಿ-ಪಕ್ಷಿಗಳನ್ನು ಪೋಷಿಸುವುದರ ಜೊತೆಗೆ ಕೊರೋನಾ ಸಮಯದಲ್ಲಿ ಮೈಸೂರಿನಲ್ಲಿರುವ ತಮ್ಮ ಫಾರ್ಮಸ್ ನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಜೊತೆಗೆ ವಾರಂತ್ಯದಲ್ಲಿ ವಿಜಯಲಕ್ಷ್ಮಿಯವರು ವಿನೇಶ್ ದರ್ಶನ್ ಜೊತೆ ಮೈಸೂರಿಗೆ ಆಗಮಿಸಿದ್ದರು. ಆಗಾಗ ಪಕ್ಷಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿರುವ ಮಗನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.

 

Sunday, 11 October 2020

ಖ್ಯಾತ ಸಂಗೀತ ನಿರ್ದೇಶಕ ರಾಜನ್ ನಿಧನ.

ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳ ನೂರಾರು ಸಿನಿಮಾಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಭಾನುವಾರ ರಾತ್ರಿ ನಿಧನಹೊಂದಿದ್ದಾರೆ.


ಕನ್ನಡ ಚಿತ್ರರಂಗದ 200 ಕ್ಕೂ ಹೆಚ್ಚು ಸಿನಿಮಾಗಳು ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು ಹಾಗೂ ಶ್ರೀಲಂಕಾದ ಸಿಂಹಳ ಭಾಷೆ ಸೇರಿ ಒಟ್ಟು 375 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಲಕ್ಷ್ಮೀ ಎಂಬ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಜನ್ ಪಾದರ್ಪಣೆ ಮಾಡಿದರು. ನಂತರ ಸಂಚಲ ಕುಮಾರಿ, ರಾಜಲಕ್ಷ್ಮೀ, ಮುತ್ತೈದೆ ಭಾಗ್ಯ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶ ಮಾಡಿದರು. ಆದರೆ ಇವರಿಗೆ ಡಾ.ರಾಜ್ ಕುಮಾರ್ ಅವರ ಗಂಧದ ಗುಡಿ ಸಿನಿಮಾ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು.

Saturday, 10 October 2020

ವಿಭಿನ್ನ ಪಾತ್ರದ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟ 'ಗಟ್ಟಿಮೇಳ' ಖ್ಯಾತಿಯ ನಟಿ ಅಶ್ವಿನಿ

ಕನ್ನಡ ಕಿರುತೆರೆಯ ಖ್ಯಾತ ನಟಿ ಅಶ್ವಿನಿ ಈಗ ಪರಭಾಷೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಹೌದು, ಅಶ್ವಿನಿ ತೆಲುಗು ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಗಟ್ಟಿಮೇಳ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟಿ ಅಶ್ವಿನಿ ಈಗ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ತೆಲುಗು ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಪಾತ್ರದ ಅಶ್ವಿನಿ ಕನ್ನಡಿಗರ ಮನೆಮಾತಾಗಿದ್ದಾರೆ. ಸಂಪ್ರದಾಯಸ್ಥ ಕುಟುಂಬದ ಹೆಣ್ಣು ಮಗಳಾಗಿ ಆರತಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅಶ್ವಿನಿ 'ನಾಗಭೈರವಿ'ಯ ಅವತಾರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮುಂದೆ ಓದಿ...

ಎರಡು ಶೇಡ್ ಗಳಲ್ಲಿ ಅಶ್ವಿನಿ ಮಿಂಚಿಂಗ್
ತೆಲುಗಿನ 'ನಾಗಭೈರವಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅಶ್ವಿನಿ ಎರಡು ಶೇಡ್ ನಲ್ಲಿ ಮಿಂಚುತ್ತಿದ್ದಾರೆ. ನಾಗದೇವತೆ ಮತ್ತು ಬುಡಕಟ್ಟು ಜನಾಂಗದ ಹುಡುಗಿಯಾಗಿ ಅಭಿನಯಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ಆರತಿ, 6 ಕೆಜಿ ತೂಕವನ್ನು ಇಳಿಸಿಕೊಂಡು ಸಣ್ಣಗಾಗಿದ್ದಾರೆ.

ಪ್ರಮುಖ ಪಾತ್ರದಲ್ಲಿ ರಮ್ಯಾ ಕೃಷ್ಣ

ವಿಶೇಷ ಅಂದರೆ ಈ ಧಾರಾವಾಹಿಯಲ್ಲಿ ಖ್ಯಾತ ನಟಿ ರಮ್ಯಾ ಕೃಷ್ಮ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟಾಲಿವುಡ್ ಗೆ ಎಂಟ್ರಿ ಕೊಟ್ಟ ಮಾತ್ರಕ್ಕೆ ಕನ್ನಡ ಕಿರುತೆರೆಯಿಂದ ದೂರ ಆಗಲ್ಲ ಎನ್ನುತ್ತಿದ್ದಾರೆ ಅಶ್ವಿನಿ. ಅಲ್ಲದೆ ದೊಡ್ಡ ಪರದೆ ಮೇಲೆ ಮಿಂಚುವ ದೊಡ್ಡ ಕನಸು ಇಟ್ಟುಕೊಂಡಿದ್ದಾರೆ. ಈ ಧಾರಾವಾಹಿ ಬಣ್ಣದ ಬದುಕಿಗೆ ದೊಡ್ಡ ತಿರುವು ನೀಡುವ ನಿರೀಕ್ಷೆಯಲ್ಲಿದ್ದಾರೆ.

ಧಾರಾವಾಹಿಯಲ್ಲಿ ಸಾಹಸ ಮತ್ತು ನೃತ್ಯ ದೃಶ್ಯಗಳೇ ಜಾಸ್ತಿ

ಭಾಷೆ ಬೇರೆಯಾಗಿರಬಹುದು ಭಾವವೊಂದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅಶ್ವಿನಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಸಾಕಷ್ಟು ಸಾಹಸ ದೃಶ್ಯಗಳಿವೆಯಂತೆ. ವಿಶೇಷ ಅಂದರೆ ನಟಿ ಅನುಷ್ಕಾ ಶೆಟ್ಟಿಗೆ ಸಾಹಸ ಹೇಳಿಕೊಟ್ಟ ಫೈಟ್ ಮಾಸ್ಟರ್, ಅಶ್ವಿನಿಗೂ ಸಾಹಸ ದೃಶ್ಯ ಹೇಳಿಕೊಟ್ಟಿದ್ದಾರಂತೆ. ಸಾಹಸ ಮತ್ತು ನೃತ್ಯ ದೃಶ್ಯಗಳು ಜಾಸ್ತಿ ಇರುವ ಕಾರಣ ಅಶ್ವಿನಿ ಈ ಧಾರಾವಾಹಿಗೆ ಹೆಚ್ಚು ಸಮಯ ನೀಡುತ್ತಿದ್ದಾರಂತೆ.

ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ್ದ ಅಶ್ವಿನಿ

ನಟಿ ಅಶ್ವಿನಿ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಅಭಿನಯಿಸುವ ಮೊದಲು 'ರಾಧಾ ರಮಣ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಅಶ್ವಿನಿ, ಪ್ರಮುಖ ಪಾತ್ರಧಾರಿ ರಮಣನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಗ್ದ ಹುಡುಗಿ ಪಾತ್ರದಲ್ಲಿ ಮಿಂಚಿದ್ದರು. ಇದೀಗ 'ನಾಗ ಬೈರವಿ' ಮೂಲಕ ಇದುವರೆಗೂ ಮಾಡಿದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Tuesday, 6 October 2020

ನಟಿ ಕಾಜಲ್ ಮದುವೆ ಯಾವಾಗ ಹಾಗು ವರನಾರು ಗೊತ್ತೇ ?

ನಟಿ ಕಾಜಲ್‌ ಅಗರ್‌ವಾಲ್‌ ಮತ್ತು ಬೆಂಗಳೂರು ಮೂಲದ ಉದ್ಯಮಿ ಗೌತಮ್‌ ಕಿಚ್ಲು ಅಕ್ಟೋಬರ್‌ 30ರಂದು ಮುಂಬೈನಲ್ಲಿ ಸಪ್ತಪದಿ ತುಳಿಯಲಿದ್ದು, ಈ ಬಗ್ಗೆ ಕಾಜಲ್‌ ಅವರೇ ಟ್ವೀಟ್‌ ಮೂಲಕ ದೃಢಪಡಿಸಿದ್ದಾರೆ.

ಹಲವು ದಿನಗಳಿಂದಲೂ ಈ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿತ್ತು. ಕೆಲವು ದಿನಗಳ ಹಿಂದೆ ಇಬ್ಬರೂ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈಗ ಇಬ್ಬರೂ ಮದುವೆಯಾಗುತ್ತಿದ್ದಾರೆ. 35ರ ಹರೆಯದ ಕಾಜಲ್ ಹಸೆಮಣೆ ಏರುತ್ತಿರುವ ಸುದ್ದಿ ಆಕೆಯ ಅಭಿಮಾನಿಗಳಲ್ಲಿ ಖುಷಿಗೆ ಕಾರಣವಾಗಿದೆ.

 

ಕಳೆದ ವರ್ಷ ಮಂಚು ಲಕ್ಷ್ಮಿ ಜೊತೆಗಿನ ಚಾಟ್‌ ವೇಳೆ ತಾನು ಮದುವೆಯಾಗುತ್ತಿರುವುದಾಗಿ ಕಾಜಲ್‌ ಹೇಳಿದ್ದು ಸುದ್ದಿಯಾಗಿತ್ತು. 'ನಾನು ವೈವಾಹಿಕ ಜೀವನಕ್ಕೆ ಅಡಿ ಇಡಲು ಸಿದ್ಧಳಾಗುತ್ತಿರುವುದು ದಿಟ.ನನ್ನನ್ನು ಕೈಹಿಡಿಯಲಿರುವ ಸಂಗಾತಿಗೆ ಚಿತ್ರರಂಗದ ಪರಿಚಯವೇ ಇಲ್ಲ' ಎಂದು ಆಕೆ ಹೇಳಿದ್ದು ಉಂಟು.

'ಕೋವಿಡ್‌-19 ಪರಿಣಾಮ ಮುಂಬೈನಲ್ಲಿ ಎರಡು ಕುಟುಂಬದ ಸದಸ್ಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಇಬ್ಬರು ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದೇವೆ. ಅದ್ದೂರಿಯಾಗಿ ಮದುವೆಯಾಗುತ್ತಿಲ್ಲ. ಸಣ್ಣ ಸಮಾರಂಭದಲ್ಲಿ ಹಸೆಮಣೆ ತುಳಿಯಲು ತೀರ್ಮಾನಿಸಿದ್ದೇವೆ' ಎಂದಿರುವ ಕಾಜಲ್‌, 'ಮದುವೆಯ ಬಳಿಕವೂ ನಾನು ಸಿನಿಮಾಗಳಲ್ಲಿ ನಟಿಸುತ್ತೇನೆ' ಎಂದು ತಿಳಿಸಿದ್ದಾರೆ.

'ನಾನು ಬೆಳ್ಳಿತೆರೆಯಲ್ಲಿ ಇಷ್ಟು ದೀರ್ಘಕಾಲ ಉಳಿಯಲು ಅಭಿಮಾನಿಗಳೇ ಕಾರಣ. ಇದೇ ಅಭಿಮಾನವನ್ನು ಮುಂದೆಯೂ ನನಗೆ ನೀಡಿ. ನಿಮ್ಮ ಆಶೀರ್ವಾದದಿಂದಲೇ ಹೊಸ ಪಯಣ ಆರಂಭಿಸಲು ನಿರ್ಧರಿಸಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ' ಎಂದು ತಿಳಿಸಿದ್ದಾರೆ.

Tuesday, 29 September 2020

ಪತ್ನಿಯ ಜತೆ ಜಗಳ ಮಾಡಿಕೊಂಡ ಯುವನಟ ಕೊನೆಗೆ ಸೀಲಿಂಗ್ ಫ್ಯಾನ್​ಗೆ ನೇಣು

ಪತ್ನಿಯ ಜತೆ ಜಗಳ ಮಾಡಿಕೊಂಡ ಯುವನಟ ಕೊನೆಗೆ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ತಮಿಳು ಚಿತ್ರರಂಗದ ಯುವನಟ ತೆನ್ನರಸು ಹಾಗೂ ಅವರ ಪತ್ನಿ ಮಧ್ಯೆ ವಾಗ್ವಾದ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದ್ದು, ಬಳಿಕ ಇದರಿಂದ ತೀವ್ರ ಬೇಸರಗೊಂಡ ತೆನ್ನರಸು ನೇಣಿಗೆ ಶರಣಾಗಿದ್ದಾರೆ. ಚೆನ್ನೈನ ಮೈಲಾಪುರದ ತಮ್ಮ ಮನೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕ್ಷಣಿಕ ಕೋಪಕ್ಕೆ ಜೀವನವನ್ನೇ ಕೊನೆಗಾಣಿಸಿಕೊಂಡ ನಟನ ಬಗ್ಗೆ ಅಭಿಮಾನಿಗಳು, ಸಿನಿಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪಾಂಡಿರಾಜ್​ ನಿರ್ದೇಶನದಲ್ಲಿ ಶಿವಕಾರ್ತಿಕೇಯನ್​ ಹಾಗೂ ಒವಿಯಯ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ 'ಮರಿನ' ಚಿತ್ರದಲ್ಲಿ ಬಾಲಕನಾಗಿ ನಟಿಸುವ ಮೂಲಕ ತೆನ್ನರಸು ಚಿತ್ರರಂಗಕ್ಕೆ ಪ್ರವೇಶಿಸಿದ್ದರು.

ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, 2 ವರ್ಷದ ಮಗುವಿದೆ. 

ರೈತರ ಬಗ್ಗೆ ದರ್ಶನ್‌ಗಿರುವ ಕಾಳಜಿ ಕುರಿತು ಪವನ್ ಒಡೆಯರ್ ಮಾತು

 ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರ ಪರ ಸದಾ ನಿಲ್ಲುವ ನಟ. ತಮ್ಮ ಪ್ರತಿಯೊಂದು ಚಿತ್ರಗಳಲ್ಲೂ ರೈತರ ಪರವಾಗಿ ಅಥವಾ ರೈತರ ಸಮಸ್ಯೆಯ ಕುರಿತು ಒಂದಲ್ಲ ಒಂದು ಅಂಶವನ್ನು ಗಂಭೀರವಾಗಿ ಚರ್ಚಿಸಿರುವ ಉದಾಹರಣೆಗಳಿವೆ. ರೈತರ ಹೋರಾಟ, ರೈತರ ಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವ ಕಲಾವಿದ ಸಹ ಹೌದು. ರೈತರ ಬಗ್ಗೆ ಡಿ ಬಾಸ್ಗೆ ಇರುವ ಕಾಳಜಿ ಕುರಿತು ಯುವ ನಿರ್ದೇಶಕ ಪವನ್ ಒಡೆಯರ್ ಬಹಿರಂಗಪಡಿಸಿದ್ದಾರೆ. 'ಬದಲಾಗು ನೀನು' ಎಂಬ ಕೊರೊನಾ ಜಾಗೃತಿ ಹಾಡಿನ ಬಗ್ಗೆ ಮಾತನಾಡಲು ದರ್ಶನ್ ಮನೆಗೆ ಹೋದ ವೇಳೆ ಅವರು ಚರ್ಚಿಸಿದ ವಿಚಾರಗಳನ್ನು ಕಂಡು ನಿರ್ದೇಶಕ ಒಡೆಯರ್ ಒಂದು ಕ್ಷಣ ಅಚ್ಚರಿಗೊಂಡಿದ್ದರಂತೆ. ಮುಂದೆ ಓದಿ...




ಏನ್ ಡೈರೆಕ್ಟರ್ರೆ,,,,,, 

''ಬದಲಾಗು ನೀನು....ಹಾಡಿನ ಕುರಿತಾಗಿ ದರ್ಶನ್ ಸರ್ ಬಳಿ ಚರ್ಚಿಸುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡಿತ್ತು. ಭೇಟಿ ಮಾಡಲು ಮನೆಗೆ ಹೋದೆ. ಅವ್ರು ಬಂದ್ರನೇ ಯಾವುದೋ ಹುಲಿ ಅಥವಾ ಸಿಂಹ,,,,ಆ ಎರಡು ಮಿಕ್ಸ್ ಆಗಿ ಒಂದು ಮೂರ್ತಿ ಬರ್ತಿದೆ ಅಂತ ಅನಿಸುತ್ತೆ. ಬಂದ್ರು, ಕೂತ್ಕೊಂಡ್ರು....ಏನ್ ಡೈರೆಕ್ಟರ್ರೆ,,,,,,ಅಂದ್ರು.'' ಎಂದು ಪವನ್ ಒಡೆಯರ್ ಮಾತು ಆರಂಭಿಸಿದರು.


ರೈತರ ಬಗ್ಗೆ ಯಾರೂ ಚಿಂತಿಸಲ್ಲ ''ದರ್ಶನ್ ಅವರಿಗಿರುವ ರೈತ ಪರ ಕಾಳಜಿ ಒಂದು ಕ್ಷಣ ಅಚ್ಚರಿ ಮೂಡಿಸಿತು. ಸಡನ್ ಆಗಿ ಯಾರೂ ಅಷ್ಟೊಂದು ಯೋಚಿಸಲ್ಲ. ಕೊರೊನಾದಿಂದ ಪ್ರಾಣಿಗಳು, ಜಾನುವಾರುಗಳಿಗೆ ಎಷ್ಟು ಕಷ್ಟ ಆಗುತ್ತೆ. ರೈತರು ಬೆಳೆದ ಬೆಳೆಯನ್ನು ಹೇಗೆ ಮಾರಾಟ ಮಾಡ್ತಾರೆ ಅಂತೆಲ್ಲ ತುಂಬಾ ಮಾತಾಡಿದ್ರು'' ಎಂದು ಒಡೆಯರ್ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.

ಮೊದಲ ದಿನ ಇಂತಹದ್ದೇ ಚರ್ಚೆ ''ಮೊದಲ ಸಲ ಭೇಟಿ ಆದಾಗ 'ಬದಲಾಗು ನೀನು' ಹಾಡಿನ ಕುರಿತು ವಿಷಯವನ್ನು ಮರೆತುಹೋದ್ವಿ. ದರ್ಶನ್ ಸರ್, ರೈತರ ಕಷ್ಟ, ದಿನಗೂಲಿ ಕಾರ್ಮಿರು ಏನ್ ಮಾಡ್ತಾರೆ ಅನ್ನೋದರ ಬಗ್ಗೆಯೇ ಹೆಚ್ಚು ಮಾತಾಡಿದ್ವಿ. ಸುಮಾರು ಅರ್ಧ ಗಂಟೆ ಮಾತಾಡಿದ್ವಿ'' ಎಂದು ಹೇಳಿಕೊಂಡಿದ್ದಾರೆ.

ತುಂಬಾ ಶಿಸ್ತು..... ''ಕ್ಯಾಮೆರಾ ಮುಂದೆ ಬರಬೇಕು ಅಂದ್ರೆ ನಾನು ಬಹಳ ಶಿಸ್ತು. ಇವತ್ತು ಬೇಡ, ಏನೂ ರೆಡಿಯಾಗಿಲ್ಲ. ನನಗೆ ಎರಡು ದಿನ ಸಮಯ ಕೊಡಿ, ಎಲ್ಲ ರೆಡಿ ಮಾಡ್ಕೊಳ್ತೀನಿ ಅಂದ್ರು. ಮರುದಿನ ಕರೆದರು, ನಾವು ಹೋಗುವುದಕ್ಕೂ ಮುಂಚೆಯೇ ರೆಡಿಯಾಗಿ ಕೂತಿದ್ರು. ಆಮೇಲೆ ಒಂದೊಂದೆ ಟೇಕ್. ಫಟ್ ಫಟ್ ಅಂತ ಮುಗಿತು. ಆಮೇಲೆ ಮತ್ತೆ ಬೇರೆ ವಿಷಯಗಳು ಚರ್ಚೆ ಮಾಡಿದ್ವಿ. ತಾಯಿ ಚಾಮುಂಡೇಶ್ವರಿಯ ಭಕ್ತ. ಅಳತೆಗೆ ತಕ್ಕ ಘನತೆ ಸಂಪಾದಿಸಿರುವ ಕರುಣಾಮಯಿ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ರಚಿತ ರಾಮ್ ಮನಸು ಕದ್ದ ಈ ಚೋರ..! ನನ್ನ ಲಿಪ್ ನೋಡಿ ಗೊತ್ತಾಗುತ್ತದೆ ಎಂದ ರಚಿತ ವಿಡಿಯೋ..!

 ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ, ನಮ್ಮ ಕನ್ನಡ ಸಿನಿಮಾರಂಗದ ಚೆಂದುಳ್ಳಿ ಚೆಲುವೆ, ಮುದ್ದು ಮುಖದ ಗೊಂಬೆ, ಡಿಂಪಲ್ ಕ್ವೀನ್ ರಚಿತ ರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇರುವ ನಟಿ. ಮತ್ತು ರಚಿತ ರಾಮ್ ಅವರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಬ್ಯುಸಿ ಇರುವ ನಟಿ, ಮತ್ತು ತಮ್ಮದೇ ಆದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳ ಬಳಗ ಕೂಡ ಹೊಂದಿದ್ದಾರೆ.

ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ, ನಮ್ಮ ಕನ್ನಡ ಸಿನಿಮಾರಂಗದ ಚೆಂದುಳ್ಳಿ ಚೆಲುವೆ, ಮುದ್ದು ಮುಖದ ಗೊಂಬೆ, ಡಿಂಪಲ್ ಕ್ವೀನ್ ರಚಿತ ರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇರುವ ನಟಿ. ಮತ್ತು ರಚಿತ ರಾಮ್ ಅವರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಬ್ಯುಸಿ ಇರುವ ನಟಿ, ಮತ್ತು ತಮ್ಮದೇ ಆದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳ ಬಳಗ ಕೂಡ ಹೊಂದಿದ್ದಾರೆ.







View this post on Instagram

#justlikethat😉

A post shared by Rachita Ram (@rachita_instaofficial) on

ರಾಗಿಣಿ, ಸಂಜನಾಗೆ ಬಿಗ್ ಶಾಕ್ – ಮೊಬೈಲ್‍ನಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

 ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ಮಾದಕ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಬಿಗ್ ಶಾಕಿಂಗ್ ನ್ಯೂಸ್ ಒಂದು ಇದೀಗ ಹೊರಬಿದ್ದಿದೆ.

ಡ್ರಗ್ಸ್ ಕೇಸ್ ಬೆನ್ನು ಹತ್ತಿರೋ ಪೊಲೀಸರಿಗೆ ಸಿನಿಲೋಕದ ಡ್ರಗ್ಸ್ ಕೇಸ್‍ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ನಟಿ ರಾಗಿಣಿ, ಸಂಜನಾ ಮೊಬೈಲ್‍ನಲ್ಲಿ ಸ್ಫೋಟಕ ಸಾಕ್ಷ್ಯ ದೊರೆತಿದೆ. ಅದೇನೆಂದರೆ ಡ್ರಗ್ಸ್ ಕೇಸ್‍ನಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಸೆಕ್ಸ್ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆಯಷ್ಟೇ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಹಾಗೂ ಉಳಿದ ಆರೋಪಿಗಳ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ಕೋರ್ಟ್ ವಜಾಗೊಳಿಸಿತ್ತು. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದು ಆದೇಶ ಕಾಯ್ದಿರಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದರು.