Showing posts with label News. Show all posts
Showing posts with label News. Show all posts

Monday, 12 October 2020

ಮೋದಿ ಬಿಡುಗಡೆ ಮಾಡಿದ ನಾಣ್ಯದಲ್ಲಿನ ವಿಶೇಷತೆಯೇನು ಗೊತ್ತಾ.?

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂರು ರೂಪಾಯಿ ಮುಖ ಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಗ್ವಾಲಿಯರ್ ರಾಜಮಾತೆ ಗೌರವಾರ್ಥ ಈ ನೂರು ರೂಪಾಯಿ ನಾಣ್ಯ ಬಿಡುಗಡೆ ಮಾಡಲಾಗ್ತಿದೆ. ವಿಜಯರಾಜೇ ಸಿಂಧ್ಯಾ ಅವರನ್ನು ಗ್ವಾಲಿಯರ್ ರಾಜಮಾತೆ ಎಂದು ಕರೆಯಲಾಗುತ್ತದೆ.


100 ರೂಪಾಯಿಗಳ ಈ ಸ್ಮರಣಾರ್ಥ ನಾಣ್ಯವನ್ನು ಹಣಕಾಸು ಸಚಿವಾಲಯ ಸಿದ್ಧಪಡಿಸಿದೆ. ರಾಜಮಾತೆ ವಿಜಯರಾಜೇ ಸಿಂಧ್ಯಾ ಕುಟುಂಬಸ್ಥರು, ಕೇಂದ್ರದ ಕೆಲ ಸಚಿವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ನಾಣ್ಯದ ಎರಡೂ ಬದಿಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ನಾಣ್ಯದ ಒಂದು ಬದಿಯಲ್ಲಿ ರಾಜಮಾತಾ ವಿಜಯರಾಜೇ ಸಿಂಧಿಯಾ ಅವರ ಚಿತ್ರವಿದೆ. ಅದ್ರ ಮೇಲ್ಭಾಗದಲ್ಲಿ ಶ್ರೀಮತಿ ವಿಜಯ ರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಕೆಳಭಾಗದಲ್ಲಿ ಇದನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ.

ಅವರು ಹುಟ್ಟಿದ ವರ್ಷವನ್ನು 1919 ಮತ್ತು ಜನನ ಶತಮಾನೋತ್ಸವ 2019ನ್ನು ಬರೆಯಲಾಗಿದೆ. ಈ ನಾಣ್ಯದ ಇನ್ನೊಂದು ಬದಿಯಲ್ಲಿ ಭಾರತವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಹಾಗೆ ಅಶೋಕ ಸ್ತಂಭದ ಚಿಹ್ನೆ ಇದೆ.

Sunday, 11 October 2020

ಭಾರತದಲ್ಲಿ ಮತ್ತೆ 66,732 ಕೊರೊನಾ ಸೋಂಕಿತರು ಪತ್ತೆ

 ನವದೆಹಲಿ, ಅಕ್ಟೋಬರ್ 12: ಭಾರತದಲ್ಲಿ ಒಂದೇ ದಿನ 66,732 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೊರೊನಾ ಸೋಂಕಿತರು 71 ಲಕ್ಷ ಗಡಿ ದಾಟಿದ್ದಾರೆ.

ಒಂದೇ ದಿನ 816 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳು 8,61,853ರಷ್ಟಿವೆ. , 61,49,536 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 71,20,539 ಕೊರೊನಾ ಸೋಂಕಿತರಿದ್ದಾರೆ. ಇದುವರೆಗೆ 1,09,150 ಮಂದಿ ಮೃತಪಟ್ಟಿದ್ದಾರೆ.

ಭಾನುವಾರ 9,94,851 ಮಾದರಿಯನ್ನು ಪರೀಕ್ಷಿಸಲಾಗಿದೆ. ಇದುವರೆಗೆ 8,78,72,093 ಮಾದರಿಗಳನ್ನು ಪ್ರದರ್ಶಿಸಲಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಭಾರತದಲ್ಲಿ ಭಾನುವಾರ 73,272 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 926 ಮಂದಿ ಸಾವನ್ನಪ್ಪಿದ್ದರು ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.85.8ರಷ್ಟಿದೆ. ಇದುವರೆಗೂ 8.5 ಕೋಟಿಯಷ್ಟು ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ವಿಶ್ವದಲ್ಲಿ 37.4 ಮಿಲಿಯನ್ ಕೊರೊನಾ ಸೋಂಕಿತರಿದ್ದಾರೆ. 26 ಮಿಲಿಯನ್ ಮಂದಿ ಗುಣಮಖರಾಗಿದ್ದಾರೆ. 1.08 ಮಿಲಿಯನ್ ಮಂದಿ ಸಾವನ್ನಪ್ಪಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ರಾಜನ್ ನಿಧನ.

ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳ ನೂರಾರು ಸಿನಿಮಾಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಭಾನುವಾರ ರಾತ್ರಿ ನಿಧನಹೊಂದಿದ್ದಾರೆ.


ಕನ್ನಡ ಚಿತ್ರರಂಗದ 200 ಕ್ಕೂ ಹೆಚ್ಚು ಸಿನಿಮಾಗಳು ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು ಹಾಗೂ ಶ್ರೀಲಂಕಾದ ಸಿಂಹಳ ಭಾಷೆ ಸೇರಿ ಒಟ್ಟು 375 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಲಕ್ಷ್ಮೀ ಎಂಬ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಜನ್ ಪಾದರ್ಪಣೆ ಮಾಡಿದರು. ನಂತರ ಸಂಚಲ ಕುಮಾರಿ, ರಾಜಲಕ್ಷ್ಮೀ, ಮುತ್ತೈದೆ ಭಾಗ್ಯ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶ ಮಾಡಿದರು. ಆದರೆ ಇವರಿಗೆ ಡಾ.ರಾಜ್ ಕುಮಾರ್ ಅವರ ಗಂಧದ ಗುಡಿ ಸಿನಿಮಾ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು.

Tuesday, 29 September 2020

ಒಂದೇ ಸಲ ಹದಿಮೂರು ಹೆಂಡತಿಯರಿಗೆ ಗರ್ಭಿಣಿ ಮಾಡಿದ ಮಹಾ ಪುರುಷ

 ಒಬ್ಬಳು ಹೆಂಡತಿಯನ್ನೇ ಸುಧಾರಿಸುವುದು ಕಷ್ಟ. ಅಂತಹದ್ದರಲ್ಲಿ ಕೆಲವರು ಎರಡೆರಡು ಮದುವೆ ಆಗಿ ಪಜೀತಿ ಪಡುವುದನ್ನು ನೋಡಿದ್ದೇವೆ. ಅದರಲ್ಲೂ ಮನೆಯಲ್ಲಿ ಒಬ್ಬ ಹೆಣ್ಣು ಗರ್ಭಿಣಿ ಆದರೆ ಸಂತೋಷಪಡುತ್ತೇವೆ. ಆದರೆ ಮನೆಯ ಅಷ್ಟೂ ಜನ ಹೆಣ್ಣೂ ಗರ್ಭಿಣಿಯಾದರೆ ಯಾವಾಗ ಯಾರ ಡೆಲಿವರಿ ಆಗುತ್ತದೆ ಎಂದು ಭಯವಾಗುತ್ತದೆ.

ಆದರೆ ಇಲ್ಲೊಬ್ಬ ಭೂಪನಿದ್ದಾನೆ. ಅವನಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 13 ಹೆಂಡತಿಯರು. ಅವನು ನೈಜಿರಿಯಾ ಮೂಲದವನು. ಆ 13 ಜನ ಹೆಣ್ಣು ಮಕ್ಕಳನ್ನು ಒಂದೇ ಸಲ ಮದುವೆಯಾದನಂತೆ. ಆದರೆ ವಿಚಿತ್ರ ಅದಲ್ಲ , ಅವನ 13 ಜನ ಹೆಂಡತಿಯರೂ ಒಂದೇ ಸಲ ಗರ್ಬಿಣಿಯಾಗಿದ್ದಾರೆ. 

ಅವನ ಶ್ರಿಮಂತಿಕೆಗೂ ಅಥವಾ ಅವನ ಪ್ರೀತಿಗೋ ಏನೋ ಮೋಹಗೊಂಡು ಅವನ ಹೆಂಡತಿಯರು ಅವನ ಬಲೆಗೆ ಬಿದ್ದಿದ್ದಾರೆ. ಸಮಾಧಾನಕರ ವಿಷಯ ಏನೆಂದರೆ ಅವರೆಲ್ಲಾ ಒಂದೇ ಮನೆಯಲ್ಲಿದ್ದು ಬಹಳ ಅನ್ಯೋನ್ಯವಾಗಿದ್ದಾರೆ. ಎರಡು ಜಡೆ ಇರುವ ಕಡೆ ಜಗಳ ಕಾಮನ್ ಅಂತಾರೆ. ಆದರೆ ಅದನ್ನು ಸುಳ್ಳು ಮಾಡಿದ್ದಾರೆ.

  

ಅವನ ಹೆಂಡತಿಯರು ಒಂದೇ ಸಲ ಗರ್ಭಿಣಿಯಾದರೂ ಅವರ ಪ್ರಸವ ಸಮಯ 10 ಹತ್ತು ದಿನ ಹೆಚ್ಚು ಕಡಿಮೆಯಲ್ಲಿ ಆಗುತ್ತದಂತೆ. ಇದರಿಂದ ಸ್ವಲ್ಪ ಅವನು ಸುಧಾರಿಸಿಕೊಳ್ಳಬಹುದು. ಇನ್ನೂ ಪ್ರಪಂಚದಲ್ಲಿ ಅತಿ ಹೆಚ್ಚು ಹೆಂಡತಿಯರನ್ನು ಹೊಂದಿದವರಲ್ಲಿ ಗಿನ್ನಿಸ್ ದಾಖಲೆಯಲ್ಲಿ ಇವನು ಎರಡನೇ ಸ್ಥಾನ ಪಡೆದಿದ್ದಾನೆ.

ಹಾಗಾದರೆ ಮೊದಲ ಸ್ಥಾನ ಹೊಂದಿರುವವರು ಯಾರು ? ಅವನಿಗೆ ಎಷ್ಟು ಹೆಂಡತಿಯರು ಇದ್ದಾರೆ ? ನಮ್ಮ ಭಾರತದ ಮಿಜೋರಾಮ್ ರವರಿಗೆ 39 ಹೆಂಡತಿಯರು ಇದ್ದಾರೆ. ಅವರು ಅತಿ ಹೆಚ್ಚು ಹೆಂಡತಿಯರನ್ನು ಹೊಂದಿರುವ ದಾಖಲೆಯಲ್ಲಿ ಮೊದಲ ಸ್ಥಾನ ಹೊಂದಿದ್ದಾನೆ.
.ಇನ್ನು ನೈಜಿರಿಯಾದವನ 13 ಹೆಂಡತಿಯರ ಫೋಟೋ ಎಲ್ಲಾ ಕಡೆ ವೈರಲ್ ಆಗಿದೆ. ಇಂಟರ್ನೆಟ್ ತುಂಬಾ ಇವನದೇ ಸುದ್ದಿ. ಇದು ಸುಳ್ಳು ಸುದ್ದೀನಾ ? ಅಥವಾ ಯಾರಾದರೂ ಈ ರೀತಿಯಲ್ಲಿ ಫೋಟೋ ಎಡಿಟ್ ಮಾಡಿದ್ದಾರಾ ? ಗೊತ್ತಾಗುತ್ತಿಲ್ಲ.