Wednesday, 14 October 2020

ನಾಳೆಯಿಂದ ಕರ್ನಾಟಕದಲ್ಲಿ ‘ಚಿತ್ರಮಂದಿರ’ ಓಪನ್: ಸರಕಾರದಿಂದ ಮಾರ್ಗಸೂಚಿ ಪ್ರಕಟ

 ಬೆಂಗಳೂರು: ಕೊರೋನಾ ಸೋಂಕಿನಿಂದ ಏರಲ್ಪಟ್ಟ ಲಾಕ್ ಡೌನ್ ಯಿಂದ ಮುಚ್ಚಲ್ಪಟ್ಟ ಚಿತ್ರಮಂದಿರಗಳು ನಾಳೆಯಿಂದ ತೆರೆಯಲಿವೆ. ಈ ಹಿನ್ನೆಲೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.



ಚಿತ್ರಮಂದಿರಗಳು ಅರ್ಧ ಮಾತ್ರ ಭರ್ತಿ ಆಗಬೇಕು. ಕಂಟೈನ್ಮೆಂಟ್ ವಲಯಗಳಲ್ಲಿ ಚಿತ್ರಮಂದಿರ ತೆರೆಯುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಈ ಮಾರ್ಗಸೂಚಿಗಳು ಚಿತ್ರಮಂದಿರಗಳು, ರಂಗಮಂದಿರಗಳು, ಮಲ್ಟಿ ಪ್ಲೆಕ್ಸ್​ಗಳಿಗೆ ಅನ್ವಯವಾಗುತ್ತವೆ.

ಮಾರ್ಗಸೂಚಿಯ ಮುಖ್ಯಾಂಶಗಳು:

ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಡ್ಡಾಯ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಮಂದಿರದ ಒಳಗೆ ಉಗುಳುವುದು ನಿಷಿದ್ಧ, ಸಿನಿಮಾ ಹಾಲ್ ಒಳಗೆ ಆಹಾರ ಸೇವನೆ ನಿಷಿದ್ಧ, ವೀಕ್ಷಕರಿಗೆ ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯ, ಪ್ಯಾಕ್ ಆಗಿರುವ ಆಹಾರ, ಸ್ನ್ಯಾಕ್ಸ್ ಗಳ ಮಾರಾಟ, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ, ರೋಗಲಕ್ಷಣ ರಹಿತ ವ್ಯಕ್ತಿಗಳಿಗೆ ಮಾತ್ರ ಮಂದಿರದ ಒಳಗೆ ಪ್ರವೇಶ, ಟಿಕೆಟ್​ಗೆ ಹಣಪಾವತಿಗೆ ಡಿಜಿಟಲ್ ಪೇಮೆಂಟ್​ಗೆ ಆದ್ಯತೆ, ಟಿಕೆಟ್ ವಿತರಿಸುವಾಗ ವೀಕ್ಷಕರ ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಬೇಕು.

No comments:

Post a Comment