Friday, 9 October 2020

ಕೊಟ್ಟಿಗೆಹಾರದಲ್ಲಿ ಉಚಿತವಾಗಿ ಕೋವೀಡ್ ಪರೀಕ್ಷೆ

 ಬಣಕಲ್:ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೊಟ್ಟಿಗೆಹಾರದ ತರುವೆ ಗ್ರಾ.ಪಂ ಆವರಣದಲ್ಲಿ ಉಚಿತ ಕೋವೀಡ್ ಪರೀಕ್ಷೆ ನಡೆಸಲಾಯಿತು.
ಕೊಟ್ಟಿಗೆಹಾರದ ವರ್ತಕರು, ಆಟೋ ಚಾಲಕರು, ಸಾರ್ವಜನಿಕರು ಸೇರಿದಂತೆ 64 ಮಂದಿ ಕೋವೀಡ್ 19 ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ವರ್ತಕರ ಸಂಘದ ಕಾರ್ಯದರ್ಶಿ ವೇಣುಗೋಪಾಲ್ ಪೈ ಮಾತನಾಡಿ ಕೊಟ್ಟಿಗೆಹಾರದಲ್ಲಿ ಕೋವೀಡ್ ಪರೀಕ್ಷೆ ಮಾಡುತ್ತಿರುವ ಬಗ್ಗೆ ಮುಂಚಿತವಾಗಿ ಎಲ್ಲಾ ವರ್ತಕರಿಗೆ ಮಾಹಿತಿ ನೀಡಲಾಗಿತ್ತು. ಬಹುತೇಕ ವರ್ತಕರು ಕೋವೀಡ್ ಪರೀಕ್ಷೆ ಮಾಡಿಕೊಂಡಿದ್ದು ಮುಂದಿನ ವಾರ ಮತ್ತೆ ಕೋವೀಡ್ ಪರೀಕ್ಷೆ ಕೊಟ್ಟಿಗೆಹಾರದಲ್ಲಿ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಉಳಿದ ವರ್ತಕರ ಆಟೋ ಚಾಲಕರ ಕೋವೀಡ್ ಪರೀಕ್ಷೆ ಮಾಡಲಾಗುವುದು ಎಂದರು.
ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ತಾಲ್ಲೂಕು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್, ಕೊಟ್ಟಿಗೆಹಾರ ಪ್ರವಾಸಿಗರು ಹೆಚ್ಚಿರುವ ಪ್ರದೇಶ ಇರುವುದರಿಂದ ಇಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೋರೋನಾ ರೋಗ ಲಕ್ಷಣಗಳು ಹೆಚ್ಚಿರುವುದು ಕಂಡು ಬಂದರೆ ಅಲಲಿಯೂ ಕೂಡ ಕೋವೀಡ್ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್, ಬಣಕಲ್ ವೈದ್ಯಾಧಿಕಾರಿ ಇಕ್ಲಾಸ್ ಅಹಮದ್, ತರುವೆ ಗ್ರಾ.ಪಂ ಪಿಡಿಓ ಶಾರದಾ, ಅಧ್ಯಕ್ಷೆ ರವಿಕಲಾ ಪೈ, ಹಿರಿಯ ಆರೋಗ್ಯ ಸಹಾಯಕಿ ಮಂಜುಳಾ, ಕಿರಿಯ ಆರೋಗ್ಯ ಸಹಾಯಕಿ ಬಬಿತಾ, ಆಶಾ ಕಾರ್ಯಕರ್ತೆಯರಾದ ಪವಿತ್ರಾ, ಜಯಂತಿ, ರೇಖಾ, ಶಾರದಾ, ಸ್ಥಳೀಯರಾದ ಆರೀಪ್, ಸಂದೀಪ್, ಗ್ರಾ.ಪಂ ಸಿಬ್ಬಂದಿ ಪ್ರವೀಣ್, ಕಾವ್ಯ, ರಮೇಶ್, ವಿಠಲ ಮುಂತಾದವರು ಇದ್ದರು.

No comments:

Post a Comment