Showing posts with label ಸ್ಥಳೀಯ. Show all posts
Showing posts with label ಸ್ಥಳೀಯ. Show all posts

Thursday, 15 October 2020

ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಆರೋಗ್ಯ ಸಂವಾದ ಕಾರ್ಯಕ್ರಮ

ಇಂದು ಸಂಜೆ 5.30ಕ್ಕೆ ಹಾಸ ನಗರದ, ಚಿಕ್ಕಹೊನ್ನೇನಹಳ್ಳಿಯ ತಿರುಮಲ ಯೋಗ ಕೇಂದ್ರದಲ್ಲಿ ಜಿಲ್ಲಾ ಬಿಜಿವಿಎಸ್ ವತಿಯಿಂದ "ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ" ಆರೋಗ್ಯ ಸಂವಾದ ಕಾರ್ಯಕ್ರಮ ನಡೆಯಲಿದೆ.


ಈ ಸಂವಾದ ದಲ್ಲಿ ಕೋವಿಡ್ ಭೀತಿ ಮತ್ತು ಎಚ್ಚರಿಕೆ ಕುರಿತು ಹಾಸನದ ಸ್ರೀರೋಗ ಮತ್ತು ಪ್ರಸೂತಿ ತಜ್ಞೆ ಮತ್ತು ಜಿಲ್ಲಾ ಬಿಜಿವಿಎಸ್ ಗೌರವಾಧ್ಯಕ್ಷರೂ  ಆದ ಡಾ. ಎ.ಸಾವಿತ್ರಿ ಸಂವಾದ  ನಡೆಸಲಿದ್ದಾರೆ.

ಆರೋಗ್ಯ ಪಯಣದ ಭಾಗವಾಗಿ ನಡೆಸಲಾಗುತ್ತಿರುವ  ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಸಂವಾದದ ಪ್ರಾಸ್ತವಿಕ ನುಡಿಯನ್ನು ಬಿಜಿವಿಎಸ್ ಜಿಲ್ಲಾಧ್ಯಕ್ಷ ಅಹಮದ್ ಹಗರೆ ನೆರವೇರಿಸಲಿದ್ದು.
ಬಿಜಿವಿಎಸ್ ಜಿಲ್ಲಾಧ್ಯಕ್ಷ ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ 

Wednesday, 14 October 2020

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷವಾದ ಹಾವು

ಚಿಕ್ಕಮಗಳೂರು : ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷವಾದ ಹಾವು



ಹಾವನ್ನ ಕಂಡು ಗಲಿಬಿಲಿಯಾದ ಡಿಸಿ ಕಚೇರಿ ಸಿಬ್ಬಂದಿಗಳು

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟನೆ

ಡಿಸಿ ಕಚೇರಿ ಒಳಗಡೆ ಓಡಾಡಿ ಗಾಬರಿ ಹುಟ್ಟಿಸಿದ ಹಾವು

ಸ್ನೇಕ್ ನರೇಶ್ ರಿಂದ ಕೆರೆ ಹಾವು ರಕ್ಷಣೆ

ಕೆರೆಹಾವು ಸೆರೆ ಹಿಡಿದ ಬಳಿಕ ನಿಟ್ಟುಸಿರು ಬಿಟ್ಟ ಡಿಸಿ ಕಚೇರಿ ಸಿಬ್ಬಂದಿಗಳು

ಹಾವನ್ನ ಕೈಯಲ್ಲಿ ಹಿಡಿದು ಖುಷಿಪಟ್ಟ ಸಿಬ್ಬಂದಿಗಳು

Monday, 12 October 2020

ವೋಲ್ಸ್ ವ್ಯಾಗನ್ ಕಾರ್ ಪಲ್ಟಿ

ಚಿಕ್ಕಮಗಳೂರು: ಮೂಡಿಗೆರೆ ವೋಲ್ಸ್ ವ್ಯಾಗನ್ ಕಾರ್ ಪಲ್ಟಿ
ಜಾವಳಿ ಯಿಂದ ಮೂಡಿಗೆರೆ ಕಡೇ ಹೋಗುತ್ತಿದ್ದಾಗ ಕಾರ್ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿದ ಕಾರ್

ಕಾರ್ ನಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪಾರು


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳುರು ಠಾಣಾ ವ್ಯಾಪ್ತಿ

Saturday, 10 October 2020

ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ: ಎಸ್.ಎಲ್.ಭೈರಪ್ಪ

ಮೈಸೂರು: ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ ಅದಕ್ಕೆ ಏಕೆ ಜನ ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ ಎಂದು ಕಳೆದ ವರ್ಷ ದಸರಾ ಉದ್ಘಾಟಿಸಿದ್ದ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಜಂಬೂಸವಾರಿಯನ್ನು ಮಾವುತರು ಮಾಡುತ್ತಾರೆ. ಇದಕ್ಕೆ ಜನ ಯಾಕೆ ಬೇಕು ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ. ಎಲ್ಲರೂ ಅವರ ಮನೆಯಲ್ಲೇ ದಸರಾ ಪೂಜೆ ಮಾಡಿಲಿ. ಬೆಟ್ಟದಲ್ಲಿ ಪೂಜೆ ನಡೆಯಲಿ. ಇದಕ್ಕೆ ಯಾಕೆ 200 ಮಂದಿ ಭಾಗಿಯಾಗಬೇಕು. ಕೊರೊನಾ ಹೆಚ್ಚಾದರೆ ಹೊಣೆ ಯಾರು ಎಂದು ದಸರಾಗೆ ಜನ ಸೇರುವುದಕ್ಕೆ ಎಸ್.ಎಲ್.ಭೈರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಂಬೂ ಸವಾರಿ ನಡೆಸೋದು ಮಾವುತರು, ಇದಕ್ಕೆ ಜನ ಬೇಕಾಗಿಲ್ಲ. ಕೆಲವರು ದಸರಾದಿಂದ ಬ್ಯುಸಿನೆಸ್ ಅಂತಾರೆ. ಜನರನ್ನ ಒಟ್ಟಾಗಿ ಸೇರಿಸಿದರೆ ಕೊರೊನಾ ಹರಡುವುದಿಲ್ಲವೆ? ಬ್ಯುಸಿನೆಸ್ ಎಲ್ಲ ಬಿಟ್ಟು ಜನರ ಆರೋಗ್ಯದ ಬಗ್ಗೆ ಯೋಚಿಸಿ ಎಂದು ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆ: ನಾಲ್ವರ ಬಂಧನ

ಬೆಂಗಳೂರು: ನಕಲಿ ಛಾಪಾ ಕಾಗದ ಮುದ್ರಣ ಮತ್ತು ಮಾರಾಟ ಆರೋಪದಡಿ ಬೆಂಗಳೂರಿನಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಕೇಂದ್ರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ನಾಲ್ವರನ್ನು ಹೆಡೆಮುರಿ ಕಟ್ಟಿದ್ದಾರೆ.


ವಿವೇಕನಗರದ ಹಸೈನ್ ಮೋದಿ ಬಾಬು, ಹರೀಶ್, ಶವರ್ ಅಲಿಯಾಸ್ ಸೀಮಾ ಮತ್ತು ನಜ್ಮಾ ಫಾತೀಮಾ ರನ್ನು ಪೊಲೀಸರು ಬಂಧಿಸಿದ್ದಾರೆ.

ಅರೋಪಿಗಳಿಂದ ಖಾಲಿ ಎ4 ಸೈಜ್ ಪೇಪರ್ ಗಳಿಗೆ ವಾಟರ್ ಮಾರ್ಕಿಂಗ್ ಮಾಡಿ ನಕಲಿ ಬಾಂಡ್ ಪೇಪರನ್ನಾಗಿ ಪರಿವರ್ತಿಸುತ್ತಿದ್ದ 10 ಡಿಟಿಪಿ, ಛಾಪಾ ಕಾಗದ ಇಮೇಜ್ ಸೇವ್ ಮಾಡಿ ಇಟ್ಟಿದ್ದ ಕಂಪ್ಯೂಟರ್, ಫ್ರಿಂಟ್ ತೆಗೆಯಲು ಉಪಯೋಗಿಸುತ್ತಿದ್ದ ಕಲರ್ ಪ್ರಿಂಟರ್ ಹಾಗೂ ಒಟ್ಟು 2 ಕೋಟಿ 71 ಲಕ್ಷ 81 ಸಾವಿರ ರೂಪಾಯಿ 25 ಸಾವಿರದ ನಕಲಿ ಛಾಪಾ ಕಾಗದವನ್ನು ವಶಪಡಿಸಿಕೊಳ್ಳಾಗಿದೆ.

ಈ ಹಿಂದೆ ನಕಲಿ ಛಾಪಾ ಕಾಗದ ಹಗರಣ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಪ್ರಕರಣದಲ್ಲಿ ತೆಲಗಿ ಸೇರಿ ಹಲವರ ಬಂಧನವಾಗಿತ್ತು.

ಮಾಸ್ಕ್ ದ ಪ್ರವಾಸಿಗರಿಗೆ ಮುಲಾಜಿಲ್ಲದೆ ಬಿತ್ತು ದಂಡ

ಚಿಕ್ಕಮಗಳೂರು:ಮೂಡಿಗೆರೆ ರಾಜ್ಯಾದ್ಯಂತ ಮಿತಿ  ಮೀರ್ತಿರೋ ಕೊರೊನ ಸೋಂಕು
ಎರಡನೇ ಶನಿವಾರ ರಜೆ ಇರುವ ಕಾರಣ ಪ್ರವಾಸಿಗರು ಬರುತ್ತಿರುವ ಹೆಚ್ಚಳ

ಮಾಸ್ಕ್ ಹಾಕದವರಿಗೆ  ಮುಲಾಜಿಲ್ಲದೆ ಬಿತ್ತು ದಂಡ

 ದಂಡದ ಜೊತೆ ಕೊರೊನ ಜಾಗೃತಿ ಮೂಡಿಸುತ್ತಿರುವ ಬಣಕಲ್ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಮತ್ತು ಪೋಲಿಸರು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರ

Friday, 9 October 2020

ಕೊಟ್ಟಿಗೆಹಾರದಲ್ಲಿ ಉಚಿತವಾಗಿ ಕೋವೀಡ್ ಪರೀಕ್ಷೆ

 ಬಣಕಲ್:ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೊಟ್ಟಿಗೆಹಾರದ ತರುವೆ ಗ್ರಾ.ಪಂ ಆವರಣದಲ್ಲಿ ಉಚಿತ ಕೋವೀಡ್ ಪರೀಕ್ಷೆ ನಡೆಸಲಾಯಿತು.
ಕೊಟ್ಟಿಗೆಹಾರದ ವರ್ತಕರು, ಆಟೋ ಚಾಲಕರು, ಸಾರ್ವಜನಿಕರು ಸೇರಿದಂತೆ 64 ಮಂದಿ ಕೋವೀಡ್ 19 ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ವರ್ತಕರ ಸಂಘದ ಕಾರ್ಯದರ್ಶಿ ವೇಣುಗೋಪಾಲ್ ಪೈ ಮಾತನಾಡಿ ಕೊಟ್ಟಿಗೆಹಾರದಲ್ಲಿ ಕೋವೀಡ್ ಪರೀಕ್ಷೆ ಮಾಡುತ್ತಿರುವ ಬಗ್ಗೆ ಮುಂಚಿತವಾಗಿ ಎಲ್ಲಾ ವರ್ತಕರಿಗೆ ಮಾಹಿತಿ ನೀಡಲಾಗಿತ್ತು. ಬಹುತೇಕ ವರ್ತಕರು ಕೋವೀಡ್ ಪರೀಕ್ಷೆ ಮಾಡಿಕೊಂಡಿದ್ದು ಮುಂದಿನ ವಾರ ಮತ್ತೆ ಕೋವೀಡ್ ಪರೀಕ್ಷೆ ಕೊಟ್ಟಿಗೆಹಾರದಲ್ಲಿ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಉಳಿದ ವರ್ತಕರ ಆಟೋ ಚಾಲಕರ ಕೋವೀಡ್ ಪರೀಕ್ಷೆ ಮಾಡಲಾಗುವುದು ಎಂದರು.
ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ತಾಲ್ಲೂಕು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್, ಕೊಟ್ಟಿಗೆಹಾರ ಪ್ರವಾಸಿಗರು ಹೆಚ್ಚಿರುವ ಪ್ರದೇಶ ಇರುವುದರಿಂದ ಇಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೋರೋನಾ ರೋಗ ಲಕ್ಷಣಗಳು ಹೆಚ್ಚಿರುವುದು ಕಂಡು ಬಂದರೆ ಅಲಲಿಯೂ ಕೂಡ ಕೋವೀಡ್ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್, ಬಣಕಲ್ ವೈದ್ಯಾಧಿಕಾರಿ ಇಕ್ಲಾಸ್ ಅಹಮದ್, ತರುವೆ ಗ್ರಾ.ಪಂ ಪಿಡಿಓ ಶಾರದಾ, ಅಧ್ಯಕ್ಷೆ ರವಿಕಲಾ ಪೈ, ಹಿರಿಯ ಆರೋಗ್ಯ ಸಹಾಯಕಿ ಮಂಜುಳಾ, ಕಿರಿಯ ಆರೋಗ್ಯ ಸಹಾಯಕಿ ಬಬಿತಾ, ಆಶಾ ಕಾರ್ಯಕರ್ತೆಯರಾದ ಪವಿತ್ರಾ, ಜಯಂತಿ, ರೇಖಾ, ಶಾರದಾ, ಸ್ಥಳೀಯರಾದ ಆರೀಪ್, ಸಂದೀಪ್, ಗ್ರಾ.ಪಂ ಸಿಬ್ಬಂದಿ ಪ್ರವೀಣ್, ಕಾವ್ಯ, ರಮೇಶ್, ವಿಠಲ ಮುಂತಾದವರು ಇದ್ದರು.

Wednesday, 7 October 2020

ಪಶ್ಚಿಮಘಟ್ಟಗಳು ಉಗ್ರರ ತಾಣವಾಗುತ್ತಿವೆ- ಶಾಸಕ ಬೋಪಯ್ಯ ಆತಂಕ

 ಕೊಡಗು ಜಿಲ್ಲೆಯಲ್ಲಿ ಉಗ್ರ ಚಟುವಟಿಕೆಗಳು ಸಕ್ರಿಯವಾಗಿದ್ದು, ದಕ್ಷಿಣ ಭಾರತವನ್ನು ಕೇಂದ್ರೀಕರಿಸಿ ಉಗ್ರರು ಪಶ್ಚಿಮಘಟ್ಟಗಳಲ್ಲಿ ತಂಗುತ್ತಿದ್ದಾರೆ ಎಂದು ಶಾಸಕ ಕೆ.ಜಿ.ಬೋಪಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದೆಯೇ ಉಗ್ರರ ಚಟುವಟಿಕೆ ಕುರಿತು ಸುಳಿವಿತ್ತು. ದಕ್ಷಿಣ ಭಾರತದ ಹಲವೆಡೆ ದಾಳಿ ನಡೆಸುವ ಸಂಚು ರೂಪಿಸಿದ್ದರು. ಆದರೆ ಈಗ ಎನ್‍ಐಎ ಅದನ್ನು ಸ್ಪಷ್ಟಪಡಿಸಿದೆ. ಹಿಂದೆಯೂ ಅಬ್ದುಲ್ ಮದನಿ ಎಂಬ ಉಗ್ರ ಕೊಡಗಿನ ಹೊಸ ತೋಟದಲ್ಲಿ ನೆಲೆಸಿದ್ದ. ಇದೆಲ್ಲವೂ ಪಶ್ಚಿಮಘಟ್ಟ ಉಗ್ರರ ತಾಣವಾಗುತ್ತಿದೆ ಎಂಬುದು ಸ್ಪಷ್ಟ. ಎನ್‍ಐಎ ಕೂಡಲೆ ಕಾರ್ಯಪ್ರವೃತ್ತರಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೊಡಗಿನ ಕಾಫಿ ಬೆಳೆಗಾರರು ಅಸ್ಸಾಂ ಕಾರ್ಮಿಕರನ್ನು ಕರೆತರುತಿದ್ದಾರೆ. ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಕೊಡಗಿನಲ್ಲಿ ನೆಲೆಸುತಿದ್ದಾರೆ. ಅಸ್ಸಾಂ ಕಾರ್ಮಿಕರನ್ನು ವಿಳಾಸ ಸಹಿತ ದಾಖಲಿಸಿಕೊಳ್ಳಬೇಕು. ಆದರೆ ಪೊಲೀಸ್ ಠಾಣೆಗಳಲ್ಲಿ ಆ ಕೆಲಸ ಆಗುತ್ತಿಲ್ಲ. ಪ್ರವಾಸಿಗರ ರೂಪದಲ್ಲಿ ಜಿಲ್ಲೆಗೆ ಯಾರೆಲ್ಲಾ ಬರುತ್ತಿದ್ದಾರೆ ಎಂಬುದನ್ನು ಅರಿಯಲು ಚೆಕ್‍ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಅಗತ್ಯವಿದೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.

Tuesday, 6 October 2020

ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಮಾಹಿತಿ ನೀಡಿ : ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಅಕ್ಟೋಬರ್ 06  : ಎಲ್ಲೆಡೆ ಪಸರಿಸುತ್ತಿರುವ ಕೊರೋನ ಸೋಂಕಿನ ನಿಯಂತ್ರಣದೊಂದಿಗೆ ವಿವಿಧ ಇಲಾಖೆಗಳ ಅನೇಕ ಯೋಜನೆಗಳ ಅನುಷ್ಠಾನ ಕಾರ್ಯ ನಿರಂತರವಾಗಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸುವುದು ಸಾಧ್ಯವಾಗಿಲ್ಲ. ಆದ್ದರಿಂದ ಮೊದಲಿನಂತೆ ಎಲ್ಲಾ ಯೋಜನೆಗಳ ಅನುಷ್ಠಾನ ಮತ್ತು ಅನುಪಾಲನಾ ಕಾರ್ಯ ಸಕ್ರಿಯವಾಗಿ, ನಿಗಧಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಲ್ಲಿ ಎಲ್ಲಾ ಇಲಾಖೆಗಳ ಕಂದಾಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
 ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಎಲ್ಲಾ ತಾಲೂಕುಗಳ ಕಂದಾಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲಾಗಿದ್ದು, ಮತ್ತೆ ಕೆಲವು ಪ್ರದೇಶಗಳಲ್ಲಿ ನಿವೇಶನದ ಸಮಸ್ಯೆಗಳಿರುವುದನ್ನು ಗಮನಿಸಲಾಗಿದೆ. ಈ ಸಂದರ್ಭದಲ್ಲಿ ನೆರೆಯ ಕೆಲವು ಗ್ರಾಮಗಳನ್ನು ಒಟ್ಟುಗೂಡಿಸಿಕೊಂಡು ಘಟಕಗಳನ್ನು ಸ್ಥಾಪಿಸುವ ಬಗ್ಗೆ ಮುಂದಿನ ಒಂದು ವಾರದೊಳಗಾಗಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸಲಹೆ ನೀಡಿದರು.
 ಅಲ್ಲದೇ ಕೆಲವು ಗ್ರಾಮಗಳಲ್ಲಿ ಸ್ಮಶಾನಭೂಮಿ ಇಲ್ಲದಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಅಂತಹ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಇದ್ದಲ್ಲಿ ಗುರುತಿಸುವುದು. ಅಥವಾ ಖಾಸಗಿ ವ್ಯಕ್ತಿಗಳು ಇಲಾಖೆಗೆ ಭೂಮಿ ಪರಭಾರೆ ಮಾಡುವವರಿದ್ದಲ್ಲಿಯೂ ವಿಚಾರಿಸಿ, ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕು. ಈ ಬಗ್ಗೆ ಎಲ್ಲಾ ತಹಶೀಲ್ದಾರರು ಗಮನಹರಿಸುವಂತೆ ಸೂಚಿಸಿದರು.
 ಜಿಲ್ಲೆಯಲ್ಲಿ ಸೋಂಕಿತರ ತಪಾಸಣೆ ಮತ್ತು ಚಿಕಿತ್ಸಾ ಕ್ರಮ ಅಡ್ಡಿ ಆತಂಕಗಳಿಲ್ಲದೆ ಮುಂದುವರೆಯುತ್ತಿರುವುದಕ್ಕೆ ಶ್ರಮಿಸುತ್ತಿರುವ ಸಂಬಂಧಿತ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಸಾರ್ವಜನಿಕರು ಸೋಂಕು ತಗುಲದಂತೆ ಸರ್ಕಾರ ಸೂಚಿಸಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ವಿಶೇಷವಾಗಿ ಮಾರುಕಟ್ಟೆಯಂತಹ ಪ್ರದೇಶದಲ್ಲಿ ಸೋಂಕಿತರು ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಸೋಂಕು ಹರಡುವುದು ತರವಲ್ಲ. ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಅನಿವಾರ್ಯವಾಗಲಿದೆ ಎಂದರು.
 ಕೋವಿಡ್‍ಗೆ ಸಂಬಂಧಿಸಿದಂತ ದೈನಂದಿನ ಮಾಹಿತಿಗಳನ್ನು ನಿಗಧಿತ ಆ್ಯಪ್‍ನಲ್ಲಿ ಅಪ್‍ಡೇಟ್ ಮಾಡುವಂತೆ ಹಾಗೂ ಹೋಂ ಕ್ವಾರಂಟೈನ್‍ನಲ್ಲಿರುವ ಸೋಂಕಿತರ ಭೇಟಿ ಕಾರ್ಯ, ಪ್ರಾಥಮಿಕ ಸಂಪರ್ಕ ಹೊಂದಿರುವವ ಮಾಹಿತಿ ಉನ್ನತೀಕರಿಸುವ ಕಾರ್ಯ ನಿರೀಕ್ಷೆಯಂತಾಗಿಲ್ಲ. ನಿಯೋಜಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ತ್ವರಿತಗತಿಯಲ್ಲಿ ಭೇಟಿ ಕಾರ್ಯ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದ ಅವರು, ಸಾರ್ವಜನಿಕರು ಮಾಸ್ಕ್ ಹಾಕದಿರುವವರಿಗೆ ದಂಡ ಹಾಕುವಲ್ಲಿ ಸ್ಥಳೀಯ ಸಂಸ್ಥೆಗಳು ಸಕ್ರಿಯವಾಗಿವೆ. ಈಗಾಗಲೆ ಕೊರೋನ ನಿಯಂತ್ರಣಕ್ಕಾಗಿ ಬಿಡುಗಡೆಯಾಗಿರುವ ಅನುದಾನ, ಬಳಕೆ, ಬೇಡಿಕೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು.
 ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತಹ ಮಾಹಿತಿಯನ್ನು ಕೂಡಲೇ ಗಣಕೀಕರಣಗೊಳಿಸಿ ಮಾಹಿತಿ ಒದಗಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಾದ್ಯಂತ ಶೇ.88ರಷ್ಟು ಬೆಳೆ ಸಮೀಕ್ಷೆ ನಡೆದಿದೆ. ಕೃಷಿಮ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಚರ್ಚೆ ನಡೆಸಿ ತ್ವರಿತಗತಿಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು. ತಹಶೀಲ್ದಾರರು ಈ ಬಗ್ಗೆ ವಿಶೇಷ ಗಮನಹರಿಸುವಂತೆ ಸೂಚಿಸಿದರು.
 ಕಳೆದೆರಡು ತಿಂಗಳಲ್ಲಿ ಆಗಿರುವ ಬೆಳೆ ನಷ್ಟದ ಕುರಿತು ಇಲಾಖೆಗಳು ನಿಗಧಿಪಡಿಸಿದ ದಿನಾಂಕದೊಳಗಾಗಿ ಬೆಳೆ ಪರಿಹಾರ ದಾಖಲೆಗಳನ್ನು ಒದಗಿಸುವಂತೆ ಹಾಗೂ ಕಳೆದ ಸಾಲಿನಲ್ಲಿ ಮಳೆಯಿಂದ ಮನೆ ಹಾನಿಗೊಳಗಾಗಿರುವ ಸಂತ್ರಸ್ಥರು ಮನೆ ಕಟ್ಟಿಕೊಳ್ಳುವ ಕಾರ್ಯ ಕೂಡಲೇ ಆರಂಭಿಸುವಂತೆ ನೋಟೀಸ್ ನೀಡಿ. ಪ್ರತಿಕ್ರಿಯಿಸದಿದ್ದಲ್ಲಿ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
 ಈ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ತಾಲೂಕುಗಳ ಕಂದಾಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.